ನಾಡಿನ ಪ್ರಖ್ಯಾತ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಭಕ್ತರಿಗೆ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ
ಕೇಂದ್ರ ಸರ್ಕಾರ ಧರ್ಮಸ್ಥಳದ ಭಕ್ತರ ಪ್ರಯಾಣಕ್ಕೆ ಹೊಸ ಅನುಕೂಲ ಮಾಡಿಕೊಡಲು ಮುಂದಾಗಿದೆ
ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸಿಗುವ ಉಜಿರೆ - ಧರ್ಮಸ್ಥಳ - ಪೆರಿಯಶಾಂತಿವರೆಗಿನ 28.49 ಕಿಮೀ ಉದ್ದದ ರಸ್ತೆಯನ್ನು ಸುಸಜ್ಜಿತ ಎರಡು ಲೇನ್ ಆಗಿ ವಿಸ್ತರಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರೂ. 613.65 ಕೋಟಿ ಹಣವನ್ನು ಈ ರಸ್ತೆ ವಿಸ್ತರಣೆ ಕಾಮಗಾರಿಗೆ ಬಿಡುಗಡೆ ಮಾಡಿದೆ
ಬಾವಿ ಏಕೆ ವೃತ್ತಾಕಾರದಲ್ಲಿ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನ,
ಮತ್ತು ಬಾಹುಬಲಿ ಪ್ರತಿಮೆಯಂತಹ ಹಲವಾರು ಮಹತ್ವದ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸಲು ಈ ರಸ್ತೆಯು ಪ್ರಯಾಣಿಕರಿಗೆ ನೆರವಾಗುತ್ತದೆ
ಅಲ್ಲದೇ, ಮಳೆಗಾಲದ ಅವಧಿಯಲ್ಲಿ ಭಕ್ತರು ಮತ್ತು ಪ್ರಯಾಣಿಕರ ಈ ರಸ್ತೆಯು ನೆರವು ಒದಗಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ
ಕಳೆದ ವರ್ಷ ಅಂದರೆ, ಅಕ್ಟೋಬರ್ 2023ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ಆಧರಿಸಿ
ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದೆ
ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸವಿದೆ