ಧಾರವಾಡದಿಂದ ಅಯೋಧ್ಯೆಗೆ ಪ್ರಖ್ಯಾತ ಕುರುಬರ ಕಂಬಳಿ ಉಡುಗೊರೆ!

ಉತ್ತರ ಕರ್ನಾಟಕದಲ್ಲಿ ಇಂಥ ಕಂಬಳಿಗಳನ್ನು ದೇವರಿಗೆ ಅರ್ಪಿಸೋದು ಶತಮಾನಗಳಿಂದ ನಡೆದು ಬಂದಿದೆ.

ಅಲ್ಲದೇ ದೇವರ ಗದ್ದುಗೆ ಮೇಲೆ ಕೂಡ ಈ ಕಂಬಳಿಯನ್ನು ಹಾಸಲಾಗುತ್ತೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಿಂದ ಬಗೆ ಬಗೆಯ ದೇಣಿಗೆಗಳನ್ನು ಭಕ್ತರು ಅಯೋಧ್ಯೆಗೆ ಕಳಿಸುತ್ತಿದ್ದಾರೆ.

ಧಾರವಾಡದಿಂದಲೂ ವಿಶೇಷ ಉಡುಗೊರೆಯೊಂದು ರಾಮನ ಪೂಜೆಗೆ ಹೋಗುತ್ತಿದೆ!

ಹೀಗೆ ಕಪ್ಪು ಕಂಬಳಿಯ ಅಂಚಿಗೆ ಕರಿ ಹಾಕುತ್ತಿರೋ ವ್ಯಕ್ತಿಯ ಹೆಸರು ಸುಭಾಸ ಬಸಪ್ಪ ರಾಯಪ್ಪನವರ್.

ಧಾರವಾಡ ನಗರದ ಕಮಲಾಪುರ ಬಡಾವಣೆಯ ನಿವಾಸಿಯಾದ ಇವರು ಕಂಬಳಿ ಮಾರಾಟಗಾರರು.

110 ಇಂಚು ಉದ್ದ ಮತ್ತು54 ಇಂಚು ಅಗಲ ಇರೋ ಈ ಕಂಬಳಿಗಳನ್ನು ಸಣ್ಣ ಕುರಿಗಳ ಕೂದಲಿನಿಂದ ತಯಾರಿಸಲಾಗಿದೆ.

ರಾಮ‌ ಮಂದಿರಕ್ಕೆ ಇವರು ಕಂಬಳಿ ಕಳಿಸುವ ಇಚ್ಚೆ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.