ಬಹುತೇಕ ಮಂದಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುವುದಿಲ್ಲ
ಇದರಿಂದ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ
ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸಿಕೊಳ್ಳಲು ನಮ್ಮ ಆಹಾರ ಪದ್ಧತಿಯ ಕಡೆಗೆ ಹೆಚ್ಚು ಗಮನ ಹರಿಸುವುದು ಬಹಳ ಮುಖ್ಯ
ಹಾಗಾಗಿ ರಾತ್ರಿ ಹೊತ್ತು ಮಲಗುವ ಮುನ್ನ ಆರೋಗ್ಯಕರವಾದ ಆಹಾರವನ್ನು ಮಾತ್ರ ಸೇವಿಸಬೇಕು
Hotel Rules: ಇನ್ನು ಮುಂದೆ ಹೋಟೆಲ್ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!
ಇದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಮತ್ತು ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಕೂಡ ಬರುತ್ತದೆ
ಬಾದಾಮಿ: ಬಾದಾಮಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿದೆ
ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಆಗಿದ್ದು, ರಾತ್ರಿ ಹೊತ್ತು ಇದನ್ನು ತಿಂದರೆ ಉತ್ತಮ ನಿದ್ರೆ ಪಡೆಯುತ್ತೀರಿ
ಹಾಲು: ಪ್ರತಿದಿನ ಒಂದು ಲೋಟ ಹಾಲು ಕುಡಿದು ಮಲಗಬೇಕು. ಅದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ
ಬಾಳೆಹಣ್ಣು: ರಾತ್ರಿ ಬಾಳೆಹಣ್ಣು ತಿಂದು ಮಲಗಬೇಕು. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಸ್ವಚ್ಛವಾಗಿರುತ್ತದೆ
ಜೇನುತುಪ್ಪ: ಜೇನುತುಪ್ಪವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ
ಸೂಪ್: ರಾತ್ರಿ ಹೊತ್ತು ಹಗುರವಾದ ಆಹಾರವನ್ನು ತಿನ್ನಬೇಕು. ಹಾಗಾಗಿ ಗಂಜಿ ತಿನ್ನಬೇಕು
ಏಕೆಂದರೆ ಇದು ತುಂಬಾ ಬೇಗ ಚೆನ್ನಾಗಿ ಜೀರ್ಣಿಸಿಕೊಳ್ಳಬಹುದು
ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?