ನಿವೃತ್ತಿ ಘೋಷಿಸಿದರೂ 'DK' ಬಿಟ್ಟುಕೊಡದ ಬೆಂಗಳೂರು!

ದಿನೇಶ್ ಕಾರ್ತಿಕ್ ಇದೀಗ ಮತ್ತೆ RCB ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

2025 IPLನಲ್ಲಿ ಡಿಕೆ ಪುನಃ ತಂಡಕ್ಕೆ ಮರಳುತ್ತಾರೆ ಎಂದು ಆರ್‌ಸಿಬಿ ಹೇಳಿದೆ.

ದಿನೇಶ್ ಕಾರ್ತಿಕ್ IPL 2024 ಆಡಿದ ನಂತರ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

RCB ತಂಡ ದಿನೇಶ್ ಕಾರ್ತಿಕ್ ರನ್ನು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಿಸಿದೆ.

ಈ ಮೂಲಕ 2025ರ ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ಮತ್ತೆ ಆರ್‌ಸಿಬಿಗೆ ಮರಳಲಿದ್ದಾರೆ.

ಈ ಬಾರಿ ತಂಡದ ಮಾಜಿ ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಜಿ ಸ್ಥಾನಕ್ಕೆ ಕಾರ್ತಿಕ್ ಬರಲಿದ್ದಾರೆ.

‘ನಮ್ಮ ಕೀಪರ್, ದಿನೇಶ್ ಕಾರ್ತಿಕ್ ಅವರಿಗೆ ಹೊಚ್ಚ ಹೊಸ ಅವತಾರದಲ್ಲಿ ಆರ್‌ಸಿಬಿಗೆ ಸ್ವಾಗತ.

DK RCB ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುತ್ತಾರೆ.

ದಿನೇಶ್ ಕಾರ್ತಿಕ್ ತನ್ನ IPL ವೃತ್ತಿಜೀವನವನ್ನು 2008 ರಲ್ಲಿ ದೆಹಲಿ ಕ್ಯಾಪಿಟಲ್ಸ್ ನೊಂದಿಗೆ ಪ್ರಾರಂಭಿಸಿದ್ದರು.

ನಂತರ 2015ರಲ್ಲಿ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ್ದರು.