ಮಹಾಬಲೇಶ್ವರನ ಸನ್ನಿಧಾನದಲ್ಲಿ ದೀಪೋತ್ಸವ ಸಂಭ್ರಮ
ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಮಂದಿರದಲ್ಲಿ ವಿರಾಜಮಾನನಾದ ಮಹಾಬಲೇಶ್ವರ.. ಹಣತೆಯಿಂದ ಕಂಗೊಳಿಸುತ್ತಿರುವ ಗರ್ಭಗುಡಿಯ ಶಿಖರ
ಇನ್ನೊಂದೆಡೆ ರಥ- ಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಟ ಪರಶಿವನ ಕಣ್ತುಂಬಿಕೊಳ್ಳುತ್ತಿರುವ ಭಕ್ತರು
ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಪುರಾಣ ಪ್ರಸಿದ್ಧ ಉತ್ತರ ಕನ್ನಡದ ಪ್ರಸಿದ್ಧ ಪುಣ್ಯ ಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ
ಈ ಗಣೇಶನನ್ನು ಎಲ್ರೂ ನೋಡ್ತಾರೆ, ಆದ್ರೆ ಪೂಜೆ ಮಾತ್ರ ಮಾಡಲ್ಲ!
ಇದನ್ನೂ ಓದಿ
ಸಹಸ್ರಾರು ಭಕ್ತರ ನಡುವೆ ತ್ರಿಪುರಾಖ್ಯ ದೀಪೋತ್ಸವು ಭಾರೀ ವಿಜೃಭಂಣೆಯಿಂದ ನೆರವೇರಿತು
ತ್ರಿಪುರಾಖ್ಯ ದೀಪೋತ್ಸವದ ಅಂಗವಾಗಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ಉತ್ಸವ, ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿ ರಥೋತ್ಸವ ಜರುಗಿದವು
ಇನ್ನೊಂದೆಡೆ ದೇವಾಲಯದಲ್ಲಿ ಮಾಡಿದ ಪುಷ್ಪಾಲಂಕಾರ ಭಕ್ತರನ್ನು ಆಕರ್ಷಿಸಿತು
ಇನ್ನು ನಂದಿ ಮಂಟಪದಲ್ಲಿ ಹೂವಿನಿಂದ ಮಾಡಿದ ರಾವಣ ಪರಶಿವನ ಆತ್ಮಲಿಂಗವನ್ನು ಎತ್ತುತ್ತಿರುವುದು
ವಿಜಯನಗರ ಸಾಮ್ರಾಜ್ಯದ ಹಂಪಿಗೆ ಹೆಮ್ಮೆಯ ಗರಿ, ಇನ್ಮೇಲೆ ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ
ಇದನ್ನೂ ಓದಿ
ಪಕ್ಕದಲ್ಲಿಯೇ ರಾವಣನಿಂದ ಪರಶಿವನ ಆತ್ಮಲಿಂಗ ಪಡೆದು ಭೂಮಿಗೆ ಇಟ್ಟ ಬಾಲ ವಟು ಸ್ವರೂಪಿ ಗಣೇಶ ನಿಂತಿರುವ ದೃಶ್ಯ ಜನರ ಗಮನ ಸೆಳೆಯಿತು
ಊರಿನವರು ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮಿಂದೆದ್ದರು