ವಾಸ್ತು ಪ್ರಕಾರ ಬಾಳೆ ಗಿಡವನ್ನು ಮನೆಯ ಆಗ್ನೇಯ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು
ಹೀಗೆ ನೆಟ್ಟರೆ ಮನೆಯಲ್ಲಿ ವಾಸ್ತು ಸಮಸ್ಯೆ ಕಾಡುತ್ತದೆ. ಅಲ್ಲದೆ ಇದನ್ನು ಮನೆಯ ಮುಖ್ಯ ಬಾಗಿಲಿನ ಬಳಿ ನೆಡಬಾರದು
ಭಾರತೀಯ ಸಂಪ್ರದಾಯದಲ್ಲಿ ಬಾಳೆಗಿಡಕ್ಕೆ ಮಹತ್ತರವಾದ ಸ್ಥಾನವಿದೆ. ಇದನ್ನು ವಿಷ್ಣುವಿನ ಪ್ರತಿರೂಪವಾಗಿ ಪೂಜಿಸಲಾಗುತ್ತದೆ
ಇದನ್ನು ಸಾಮಾನ್ಯವಾಗಿ ತೋಟದಲ್ಲಿ ಮಾತ್ರವಲ್ಲದೆ ಹಿತ್ತಲಿನಲ್ಲಿಯೂ ಬೆಳೆಯಲಾಗುತ್ತದೆ
ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು? ಎಲ್ಲಿ ಮಲಗಿದ್ರೆ ಕೆಟ್ಟ ಕನಸು, ಎಲ್ಲಿ ಮಲಗಿದ್ರೆ ಸುಖ ನಿದ್ದೆ?
ಆದರೆ ಈ ಬಾಳೆ ಗಿಡ ನೆಡುವಾಗ ನಾವು ಮಾಡುವ ಕೆಲವು ತಪ್ಪುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ ಎಂದು ಕೆಲವರ ನಂಬಿಕೆಯಾಗಿದೆ
ಈ ಬಾಳೆ ಗಿಡದ ಪಕ್ಕದಲ್ಲಿ ಒಂದಷ್ಟು ಗಿಡಗಳನ್ನು ಬೆಳೆಸಿದರೆ ಸಮಸ್ಯೆ ಹೆಚ್ಚುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು
ಬಾಳೆ ಗಿಡವನ್ನು ಎಂದಿಗೂ ಮನೆಯ ಮುಂದೆ ನೆಡಬಾರದು, ಅದನ್ನು ಮನೆಯ ಹಿಂದೆ ನೆಡಬೇಕು
ಅಲ್ಲದೆ, ಬಾಳೆ ಗಿಡದ ಸುತ್ತಲೂ ಸಾಕಷ್ಟು ಶುಚಿತ್ವವನ್ನು ಗಮನಿಸಬೇಕು. ಇಲ್ಲವಾದರೆ ವಾಸ್ತು ದೋಷ ಬರುತ್ತದೆ
ಸಂಕ್ರಾಂತಿ ಹಬ್ಬ ಯಾವಾಗ ಎನ್ನುವ ಗೊಂದಲ ಇದ್ಯಾ? ಇಲ್ಲಿದೆ ಪಕ್ಕಾ ಮಾಹಿತಿ
ಬಾಳೆ ಗಿಡವು ವಿಷ್ಣುವನ್ನು ಪ್ರತಿನಿಧಿಸುವುದರಿಂದ ಗುರುವಾರ ಅರಿಶಿನವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಅಲ್ಲದೆ ಈ ದಿನ ಗಿಡಕ್ಕೆ ತುಪ್ಪದ ದೀಪ ಹಚ್ಚಿ ಪೂಜಿಸಿದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ
ವಾಸ್ತು ಪ್ರಕಾರ ಬಾಳೆ ಗಿಡವನ್ನು ಮನೆಯ ಆಗ್ನೇಯ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಹೀಗೆ ನೆಟ್ಟರೆ ಮನೆಯಲ್ಲಿ ವಾಸ್ತು ಸಮಸ್ಯೆ ಕಾಡುತ್ತದೆ
ಅಲ್ಲದೆ ಇದನ್ನು ಮನೆಯ ಮುಖ್ಯ ಬಾಗಿಲಿನ ಬಳಿ ನೆಡಬಾರದು
ಬಾಳೆ ಗಿಡದ ಪಕ್ಕದಲ್ಲಿ ಕಾಡು ಗುಲಾಬಿ ಗಿಡ ನೆಡುವುದು ಅಥವಾ ಯಾವುದೇ ಮುಳ್ಳಿನ ಗಿಡ ಬೆಳೆಸುವುದು ತೊಂದರೆಗೆ ಆಹ್ವಾನ ನೀಡುತ್ತಿದೆ. ಇದರಿಂದ ಆರ್ಥಿಕ ನಷ್ಟವೂ ಉಂಟಾಗುತ್ತದೆ
ಈ ವಿಚಾರ ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ