ಸಾಂಬಾರು ಪದಾರ್ಥಗಳಿಗೆ ಉತ್ತರ ಕನ್ನಡ ಹೆಸರುವಾಸಿ, 

ಅದರಲ್ಲೂ ವನಜನ್ಯ ಸಾಂಬಾರು ಪದಾರ್ಥಗಳು ಭೂಮಿಯ ಮೇಲೆ ಸ್ವರ್ಗದ ರಸದೌತಣವನ್ನು ಉಣ್ಣುವವರಿಗೆ ನೀಡುತ್ತವೆ

ಅಂತಹ ಪದಾರ್ಥಗಳಿಗೆ ಬೆಲೆಯೂ ಜಾಸ್ತಿ. ಆದರೆ ಇವತ್ತು ನಾವು ಪರಿಚಯಿಸುತ್ತಿರುವ ಪದಾರ್ಥ ಸಾಂಬಾರು ಪದಾರ್ಥಗಳ ರಾಣಿ

ಹೌದು, ಅದು ಯಾವುದು ಅಂತೀರಾ ಅದೇ ವಾಟೆಹುಳಿ. ನಿತ್ಯಹರಿದ್ವರ್ಣದ ಕಾಡಲ್ಲಿ ಹಲವರ ಜೀವನ ಕಟ್ಟಿಕೊಡುವ ಪದಾರ್ಥವಿದು

ಇದನ್ನು ಇಂಗ್ಲೀಷ್ ನಲ್ಲಿ ಮಂಕಿಫ್ರೂಟ್ ಎನ್ನುತ್ತಾರೆ. ಎತ್ತರದ ಮರಗಳಲ್ಲಿ 20-40 ಅಡಿ ಮೇಲೆ ಬೆಳೆಯುವ ಇವುಗಳನ್ನು ಏಪ್ರಿಲ್-ಮೇ ತಿಂಗಳಲ್ಲಿ ಕೊಯ್ಲು ಮಾಡಲಾಗುತ್ತದೆ

ಮರ ಹತ್ತಿ ಈ ಕಾಯಿಗಳನ್ನು ಕೊಯ್ದು, ಮೆಟ್ಟಗತ್ತಿಯಲ್ಲಿ ಅಥವಾ ಈಳಿಗೆಯಲ್ಲಿ ಸ್ಲೈಸ್ ಮಾದರಿಯಲ್ಲಿ ಹೆಚ್ಚಿಕೊಂಡು ನಾಲ್ಕು ದಿನ ಬಿಸಿಲಿಗೆ ಒಣ ಹಾಕಿದರೆ ವಾಟೆ ಹುಳಿ ತಯಾರಾಗುತ್ತದೆ

ಇದು ಅರಬ್ ದೇಶದ ಜನರ ಫೇವರೇಟ್ ಪ್ರತಿ ಸೀಸನ್ ಅಲ್ಲೂ 800-1200ರವರೆಗೆ ಕೆಜಿಗೆ ಇದರ ಬೆಲೆ ಇರುತ್ತದೆ

ಪ್ರಸ್ತುತ ಕುಮಟಾದ ಹುಳಸೆ ಗ್ರಾಮದ ಪ್ರಗತಿಪರ ರೈತ ಗಣೇಶ್ ಹೆಗಡೆ ವಾಟೆಹುಳಿ ತಯಾರಿಸುತ್ತಿದ್ದಾರೆ

 ಪ್ರತಿ ವರ್ಷ ಇದು ಒಂದೇ ಬೆಳೆಯಾದರೂ ಆರಾಮಾಗಿ ಉಪ ಬೆಳೆಯಾಗಿ ಬೆಳೆದುಕೊಳ್ಳಬಲ್ಲ ಲಾಭದಾಯಕ ಬೆಳೆ

ಅವರು ಈಗಾಗಲೇ ಪ್ರತೀ ವರ್ಷ 50 ಕೆಜಿಯಷ್ಟು ವಾಟೆಹುಳಿಯನ್ನು ಅಂಕೋಲಾ, ಕುಮಟಾ, ಕಾರವಾರಕ್ಕೆ ಕಳಿಸುತ್ತಿದ್ದಾರೆ

 ಅಲ್ಲಿಂದ ಮುಂದೆ ಅದು ಮಂಗಳೂರು, ಕೇರಳ, ದುಬೈ ಸೇರಿದಂತೆ ಹಲವೆಡೆ ಹೋಗುತ್ತದೆ

ಇದನ್ನು ಟೊಮೆಟೊಗೆ ಪರ್ಯಾಯವಾಗಿ ಬಳಸಬಹುದು

ಅಲ್ಲದೇ ಮೀನು ಪಳದಿ ಸೇರಿದಂತೆ ಮೀನಿನ ಹಲವು ರೀತಿಯ ಸಾಂಬಾರ್ ಗಳು ಕರಾವಳಿಯಲ್ಲಿ ಘಮ ಬೀರುವುದಕ್ಕೆ ವಾಟೆ ಹುಳಿಯ ರುಚಿಯೂ ಕಾರಣವಾಗಿದೆ

Bidar News: ಔರಾದ್‍ನಿಂದ 1,700 ಕಿ.ಮೀ ಪಾದಯಾತ್ರೆ ಮಾಡಿ ಕೇದಾರನಾಥನ ದರ್ಶನ ಪಡೆದ ಭಕ್ತ!