ಆಚಾರ್ಯ ಚಾಣಕ್ಯರು ಹೇಳಿರುವ ಮಾತುಗಳು ಇಂದು ಮತ್ತು ನಾಳೆಯೂ ಜೀವಂತವಾಗಿವೆ.  ಜೀವನ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ

ಜೀವನದ ಯಶಸ್ಸು, ಸಂಸಾರ ನಿರ್ವಹಣೆ, ಗಂಡ-ಹೆಂಡತಿ ಸಂಬಂಧದ ಬಗ್ಗೆಯೂ ಆಚಾರ್ಯ ಚಾಣಕ್ಯರು ಹೇಳುತ್ತಾರೆ. ವೈವಾಹಿಕ ಜೀವನ, ವೈರಾಗ್ಯದ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ

ಪ್ರಸವ ವೈರಾಗ್ಯ, ಸ್ಮಶಾನ ವೈರಾಗ್ಯ ಮತ್ತು ಪುರಾಣ ವೈರಾಗ್ಯ ಎಂಬ ತ್ರಿವಿಧದ ವೈರಾಗ್ಯಗಳಿವೆ. ಈ ವೈರಾಗ್ಯದ ಚಾಣಕ್ಯ ನೀತಿಯಲ್ಲಿ ವಿವರವಾಗಿ ತಿಳಿಸಲಾಗಿದೆ

ವೈರಾಗ್ಯದ ಶ್ಲೋಕ ಧರ್ಮೋಖ್ಯಾನೇ ಸ್ಮಶಾನೇ ಚ ರೋಗಿಣಾಂ ಯಾ ಮತಿರ್ಭವೇತ್| ಸಾ ಸರ್ವದೈವ ತಿಷ್ಠೇಚ್ಚತ್ ಕೋ ನ ಮುಖ್ಯೇತ್ ಬಂಧನಾತ್||

2 ನೇ ವಾರವೂ ಘೋಸ್ಟ್ ಅಬ್ಬರ, 270 ಥಿಯೇಟರ್‌ನಲ್ಲಿ ಸ್ಟಿಲ್ ರನ್ನಿಂಗ್‌

ಶ್ಲೋಕದ ಅರ್ಥ ಪುರಾಣ ಪ್ರವಚಗಳಲ್ಲಿ ತ್ರಿವಿಧದ ವೈರಾಗ್ಯದ ಬಗ್ಗೆ ತಿಳಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ತೆರಳಿದಾಗ, ರೋಗ ರುಜಿನಗಳಿಂದ ನರಳುತ್ತಿರುವಾಗ ಜೀವನದಲ್ಲಿ ವೈರಾಗ್ಯದ ಮಾತು ಬರುತ್ತದೆ. ಆದ್ರೆ ಈ ಸಮಸ್ಯೆಗಳು ನಿವಾರಣೆ ಆಗುತ್ತಿದ್ದಂತೆ ವೈರಾಗ್ಯ ಯೋಚನೆ ಮರೆಯುತ್ತಾನೆ ಎಂದರ್ಥ

ಪ್ರಸವದ ವೈರಾಗ್ಯ ಪ್ರಸವದ ಸಂದರ್ಭದಲ್ಲಿ ನೋವು ಅನುಭವಿಸುವ ಮಹಿಳೆ ಇನ್ನೆಂದೂ ಪತಿಯ ಜೊತೆ ಸೇರಲ್ಲ ಎಂದು ನಿರ್ಧರಿಸುತ್ತಾಳೆ ಒಂದು ರೀತಿ ಗಂಡನ ಬಳಿ ಹೋಗಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾಳೆ

ವೈರಾಗ್ಯದ ಭಾವ ಉಂಟಾದಾಗ ಎಲ್ಲವೂ ಸಾಕು ಅನ್ನಿಸುತ್ತದೆ. ಆದ್ರೆ ಮನುಷ್ಯ ಜೀವನದಲ್ಲಿ ಇದೆಲ್ಲವೂ ಕ್ಷಣಿಕವಾಗಿರುತ್ತದೆ

ಆದ್ರೆ ಇದೂ ಸದಾಕಾಲ ಅಳವಡಿಸಿಕೊಂಡರೆ ಮಾತ್ರ ಮುಕ್ತಿ/ಮೋಕ್ಷ ಸಿಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ

ಹಬ್ಬಕ್ಕೆ ದೇವರ ಮನೆಯಲ್ಲಿರೋ ಹಿತ್ತಾಳೆ ವಿಗ್ರಹ ಹೀಗೆ ಸ್ವಚ್ಛಗೊಳಿಸಿ; ಫಳ-ಫಳ ಹೊಳೆಯುತ್ತೆ!