ಅಶ್ವತ್ಥಾಮನ ಕುರಿತ ಅಧ್ಯಾಯಗಳು ಕಂಡು ಬರುವುದು ಮಹಾಭಾರತದಲ್ಲಿ. ಅದರಲ್ಲೂ ಮೂಲ ಮಹಾಭಾರತದಲ್ಲಿ ವ್ಯಾಸರು ರಚಿತ ಮಹಾಕಾವ್ಯದಲ್ಲಿ ಅಶ್ವತ್ಥಾಮನನ್ನು ಚಿರಂಜೀವಿ ಎಂದು ಉಲ್ಲೇಖಿಸಲಾಗಿದೆ.
ಆದರೆ ನಚಿಕೇತ್ ಹೆಗಡೆ ಅವರ ಪ್ರಕಾರ, ಚಿರಂಜೀವಿ ಅನ್ನೋದು ಸಾವಿಲ್ಲದ ಅನ್ನೋ ಅರ್ಥವನ್ನ ಹೊಂದಿಲ್ಲ. ಬದಲಿಗೆ ದೀರ್ಘ ಕಾಲ ಬದುಕುವವನು ಅನ್ನೋದಾಗಿದೆ.
ಅದೇನೆ ಇದ್ದರೂ ಹೆಗಡೆ ಅವರ ವಿಮರ್ಶೆ ಪ್ರಕಾರ, ಅಶ್ವತ್ಥಾಮ ಇಂದಿಗೆ ಭೂಮಿಯಲ್ಲಿ ಬದುಕಿ ಇರಲು ಸಾಧ್ಯವೇ ಇಲ್ಲ ಅನ್ನೋ ವಾದವಾಗಿದೆ.
ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಅಶ್ವತ್ಥಾಮನು ಉಪಪಾಂಡವರನ್ನು ಕೊಂದು ನಂತರ ದರ್ಭೆಯನ್ನು ಮಂತ್ರಿಸಿ ಬ್ರಹ್ಮಾಸ್ತ್ರವಾಗಿಸಿ ತುಂಬು ಗರ್ಭಿಣಿ ಉತ್ತರೆಯ ಗರ್ಭಕ್ಕೆ ಪ್ರಯೋಗಿಸಿದ ಪಾಪ ಕಾರ್ಯ ಮಾಡುತ್ತಾನೆ.
ಇದರಿಂದ ತೀರಾ ಬೇಸರ ಹಾಗೂ ಸಿಟ್ಟಿನಿಂದ ಪರಮಾತ್ಮ ಕೃಷ್ಣನು ಅವನಿಗೆ ಶಪಿಸುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿನ ಮಣಿಯನ್ನು ಕಿತ್ತೆಸೆದು ಅವನಿಗೆ “ತ್ರೀಣಿ ವರ್ಷ ಸಹಸ್ರಾಣಿ ವಿಚರಶ್ಯಸಿ ಮಹೀಮಿಯಾನ್” ಎಂದು ಶಾಪ ಕೊಡುತ್ತಾನೆ.
ಹಾಗೆಂದರೆ 3000 ವರ್ಷಗಳ ಕಾಲ ಕುಷ್ಟ, ಕ್ಷಯ ರೋಗದೊಂದಿಗೆ ಭೂಮಿಯಲ್ಲಿ ನರಳುತ್ತಾ, ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದೇ ಹಿಂಸೆ ಪಡುತ್ತಾ ಸಂಚರಿಸು ಎಂದಾಗಿದೆ.
ಹೀಗಾಗಿ ಕುರುಕ್ಷೇತ್ರ ಯುದ್ಧ ನಡೆದು ಈಗಾಗಲೇ 5000 ವರ್ಷ ಕಳೆದಿದ್ದು ಆ ಲೆಕ್ಕಚಾರ ಪ್ರಕಾರವೂ ಅಶ್ವತ್ಥಾಮ ಬದುಕಿರುವ ಸಾಧ್ಯತೆ ತೀರಾ ಕಮ್ಮಿ.
ಆದ್ದರಿಂದ ಕಲ್ಕಿ ಚಿತ್ರದಲ್ಲಿ ತೋರಿಸಿದ ಹಾಗೆ ಅಶ್ವತ್ಥಾಮ ಅಷ್ಟು ಶಕ್ತಿಶಾಲಿಯೂ ಆಗಿರುವುದಿಲ್ಲ ಹಾಗೆಯೇ ಈಗ ಇರುವುದಕ್ಕೂ ಸಾಧ್ಯವಿಲ್ಲ ಅನ್ನೋದು ವಿದ್ವಾಂಸರ ಅಭಿಪ್ರಾಯ. ಒಟ್ಟಿನಲ್ಲಿ ‘ಕಲ್ಕಿ’ ಸಿನೆಮಾ ಮಹಾಕಾವ್ಯದ ಪುನರ್ ಅವಲೋಕನಕ್ಕೆ ಹೊಸ ದಾರಿ ಒದಗಿಸಿದೆ ಎಂದರೆ ತಪ್ಪಾಗದು.
ಮಕ್ಕಳಿಂದ ವಾರಕರಿ ಧಿರಿಸಿನಲ್ಲಿ ಮೆರವಣಿಗೆ!