ಕಾಗೆ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುವ ಪಕ್ಷಿಯಾಗಿದೆ. ಈ ಕಾಗೆ ನಮ್ಮ ಜೀವನದ ಒಂದು ಅಂಗವಾಗಿದೆ
ಈ ಕಾಗೆ ನಮ್ಮ ಪೂರ್ವಜರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಕಾಗೆಯ ಮನೆ ಹತ್ತಿರ ಬಂದು ಕೂರುವುದಕ್ಕೂ ಹಾಗೂ ತಲೆಗೆ ಬಂದು ಕುಕ್ಕಿದರೂ ಅದಕ್ಕೂ ನೂರಾರು ಅರ್ಥಗಳಿದೆ
ಹಾಗಾದ್ರೆ ಈ ಕಾಗೆ ನಿಮ್ಮ ತಲೆಗೆ ಬಂದು ಹೊಡೆದರೆ ಅಥವಾ ಕುಕ್ಕಿದರೆ aದರ ಅರ್ಥವೇನು ಹಾಗೂ ಅದರಿಂದ ಏನಾಗುತ್ತದೆ ಎಂಬುದು ಇಲ್ಲಿದೆ
ಕಾಗೆಯನ್ನ ಶನಿ ದೇವರ ವಾಹನ ಎನ್ನಲಾಗುತ್ತದೆ. ಈ ಕಾಗೆ ನಮಗೆ ಅನೇಕ ಭಯವನ್ನ ಹುಟ್ಟಿಸುತ್ತದೆ
ಈ ರಾಶಿಯವರು ತಮ್ಮ ಸಂಗಾತಿಯನ್ನ ಮನಸಾರೆ ಪ್ರೀತಿಸ್ತಾರಂತೆ!
ಕಾಗೆ ಹತ್ತಿರಕ್ಕೆ ಬಂದರೆ ನಮಗೆ ಬಹಳ ಭಯವಾಗುತ್ತದೆ. ಆದರೆ ಈ ಕಾಗೆ ಕೆಲವೊಮ್ಮೆ ಶುಭಫಲಗಳನ್ನ ನೀಡುತ್ತದೆ ಎನ್ನಲಾಗುತ್ತದೆ
ಇದಲ್ಲದೇ ಈ ಕಾಗೆಯೂ ನಮ್ಮ ಭವಿಷ್ಯದ ಬಗ್ಗೆ ಸೂಚನೆಯನ್ನ ನೀಡುತ್ತದೆ ಎನ್ನುವ ನಂಬಿಕೆ ಇದೆ
ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದಕ್ಕೆ ಕೆಟ್ಟ ಅರ್ಥಗಳೇ ಇರುವುದು. ಈ ರಿತಿ ಕಾಗೆ ಕುಟ್ಟುವುದು ಅಶುಭ ಎಂದರ್ಥ
ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಎಂಬುದರ ಸೂಚನೆ ಎನ್ನಲಾಗುತ್ತದೆ. ಅಲ್ಲದೇ, ಸದ್ಯದಲ್ಲಿ ಅಶುಭ ಸುದ್ದಿ ಕೇಳುವ ಸಂಭವವೂ ಇರುತ್ತದೆ
ಇದು ನಿಮ್ಮ ಜೀವನದ ಮೇಲೆ ಅನೇಕ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ
ಮೊದಲೇ ಹೇಳಿದಂತೆ ಈ ಕಾಗೆ ನಮಗೆ ಭವಿಷ್ಯದ ಸೂಚನೆಯನ್ನ ನೀಡುತ್ತದೆ. ಮುಖ್ಯವಾಗಿ ಇದು ಕುಟುಂಬದಲ್ಲಿ ಕೆಟ್ಟದ್ದೇನೋ ನಡೆಯೋ ಸೂಚನೆಯನ್ನ ಕಾಗೆ ನೀಡುತ್ತದೆ
ಈ ಕಾರಣಕ್ಕೆ ಕಾಗೆ ತಲೆ ಮೇಲೆ ಕುಕ್ಕಿ ಹೋಗುತ್ತದೆ ಎನ್ನುತ್ತಾರೆ ಹಿರಿಯರು. ಅಲ್ಲದೇ, ತಲೆಗೆ ಕಾಗೆ ಕುಕ್ಕಿದರೆ ಮನೆಯಲ್ಲಿ ನೋವಿನ ಘಟನೆ ನಡೆಯಬಹುದು
ನೀವು ಸಾವಿನ ಸುದ್ದಿ ಕೇಳುವಿರಿ ಎಂಬ ಸೂಚನೆ ಕಾಗೆ ನೀಡುತ್ತದೆ
ಕನಸಿನಲ್ಲಿ ಪದೇ ಪದೇ ಚಿನ್ನ ಕಾಣಿಸುತ್ತಾ? ಹಾಗಾದ್ರೆ ನೀವು ಎಚ್ಚರವಾಗಿರಬೇಕಂತೆ