ಮನೆ ತುಂಬಾ ಇರುವೆ ಕಾಟನಾ? ಹೀಗೆ ಮಾಡಿ ಒಂದು ಇರುವೆಯೂ ಇರಲ್ಲ!
ಕೆಲವೊಮ್ಮೆ ಇರುವೆಗಳು ಬಟ್ಟೆಯೊಳಗೆ ಸೇರಿಕೊಂಡು ಕಚ್ಚುತ್ತದೆ
ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನ ನಾನಾ ಪ್ರಯತ್ನಿಗಳನ್ನು ಮಾಡಿದರೂ ಅವು ಮನೆಬಿಟ್ಟು ಹೋಗುವುದಿಲ್ಲ
ಹಾಗಾಗಿ ನಾವಿಂದು ಕೆಲ ಟಿಪ್ಸ್ ನೀಡುವ ಮೂಲಕ ಇರುವೆಗಳನ್ನು ಮನೆಯಿಂದ ಓಡಿಸುವುದು ಹೇಗೆ ಎಂದು ತಿಳಿಸುತ್ತೇವೆ
ಬೇಕಿಂಗ್ ಸೋಡಾ: ನಿಮ್ಮ ಮನೆಯಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳಿದ್ದರೆ, ಬೇಕಿಂಗ್ ಸೋಡಾವನ್ನು ಇರುವೆ ನಿವಾರಕವಾಗಿ ಬಳಸುವುದು ಅಪಾಯಕಾರಿ
ಏಕೆಂದರೆ ಇದರ ವಾಸನೆಯು ಮಕ್ಕಳ ವಾಂತಿಗೆ ಕಾರಣವಾಗಬಹುದು. ಒಂದು ವೇಳೆ ಮಕ್ಕಳು ಮತ್ತು ಪ್ರಾಣಿಗಳಿಲ್ಲದಿದ್ದರೆ ಇರುವೆಗಳು ಬರುವ ಕಡೆಗೆ ಅಡಿಗೆ ಸೋಡಾವನ್ನು ಉದುರಿಸಬಹುದು
ಕಾಳುಮೆಣಸು: ಇರುವೆಗಳಿಗೆ ಕಾಳುಮೆಣಸು ಅಂದರೆ ಇಷ್ಟವಾಗುವುದಿಲ್ಲ. ಆದ್ದರಿಂದ ಇರುವೆಗಳು ಸೇರುವ ಸ್ಥಳಗಳಲ್ಲಿ ನೀವು ಮೆಣಸು ಸಿಂಪಡಿಸಬಹುದು
ದಾಲ್ಚಿನ್ನಿ: ನಮಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುತ್ತದೆ. ಆದರೆ ಇರುವೆಗಳು ಇದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆ ಗೂಡುಗಳ ಬಳಿ ದಾಲ್ಚಿನ್ನಿ ಪುಡಿಯನ್ನು ಹಾಕಿದರೆ ಅವು ಬೇರೆಡೆ ಹೋಗುತ್ತವೆ
ಪಾದಗಳ ಹಿಮ್ಮಡಿ ಒಡೆದು ಹಿಂಸೆ ಆಗ್ತಿದ್ಯಾ? ಡೋಂಟ್ವರಿ, ಇಲ್ಲಿದೆ ಸೂಪರ್ ಟಿಪ್ಸ್
ನಿಂಬೆ ರಸ: ನಿಂಬೆ ರಸ ನಿಂಬೆ ರಸವು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಏಕೆಂದರೆ ಇರುವೆಗಳಿಗೆ ಹುಳಿ ಇಷ್ಟವಾಗುವುದಿಲ್ಲ
ವಿನೆಗರ್: ಇರುವೆಗಳನ್ನು ಓಡಿಸಲು ವಿನೆಗರ್ ಬೆಸ್ಟ್ ಮದ್ದು ಎಂದೇ ಹೇಳಬಹುದು
ನೀರಿಗೆ ಸ್ವಲ್ಪ ವಿನೆಗರ್ ಸೇರಿಸಿ, ಇರುವೆಗಳಿರುವ ಜಾಗದಲ್ಲಿ ಸಿಂಪಡಿಸಿ. ಆಗ ಇರುವೆಗಳು ತಕ್ಷಣವೇ ಹೊರಟು ಹೋಗುತ್ತವೆ
ಹುಡುಗಿಯೊಬ್ಬಳು ನಿಮ್ಮನ್ನು ಪ್ರೀತಿಸುತ್ತಿದ್ದಾಳೆಂದರೆ ಆಕೆಯ ನಡವಳಿಕೆಗಳು ಹೀಗಿರುತ್ತವೆ!