ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಯನ್ನು ಯಾವ ದಿಕ್ಕಿಗೆ ಮಾಡಬೇಕು ಅನ್ನೋದನ್ನು ಹೇಳಲಾಗಿದೆ
ವಾಸ್ತು ಶಾಸ್ತ್ರದ ಅನುಸಾರವಾಗಿ ಊಟ ಮಾಡಿದ್ರೆ ಆರೋಗ್ಯ ಮತ್ತು ದೇಹದ ಮೇಲೆ ಅನುಕೂಲಕರ ಪರಿಣಾಮ ಬೀರಲಿದೆ ಎಂದು ನಂಬಲಾಗಿದೆ
ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ದೇಹ, ಆರೋಗ್ಯಕ್ಕೆ ಎರಡಕ್ಕೂ ಪ್ರಯೋಜನ ಎಂಬುದನ್ನು ಹೇಳಲಾಗುತ್ತದೆ
ಹಾಗಾದ್ರೆ ಯಾವ ದಿಕ್ಕಿಗೆ ಕುಳಿತು ಆಹಾರ ಸೇವಿಸಬೇಕು ಎಂಬುದರ ಮಾಹಿತಿ ಇಲ್ಲಿದೆ
ದೇಹದ ಈ 10 ಭಾಗಗಳ ಮೇಲೆ ಹಲ್ಲಿ ಬಿದ್ರೆ ಏನರ್ಥ? ಅದೊಂದು ಜಾಗ ಬಹಳ ಲಕ್ಕಿಯಂತೆ
ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ದೇವತೆಗಳು ಮತ್ತು ಶಕ್ತಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ
ಆದ್ದರಿಂದ ಆಹಾರ ಸೇವನೆ ಮಾಡುವಾಗ ನಾವು ಕುಳಿತುಕೊಳ್ಳುವ ದಿಕ್ಕು ಪ್ರಾಮಖ್ಯತೆಯನ್ನು ಪಡೆದುಕೊಳ್ಳುತ್ತದೆ
ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ, ಊಟದ ಕೋಣೆ, ಮಲಗುವ ಕೋಣೆ, ದೇವರ ಕೋಣೆ ಯಾವ ದಿಕ್ಕಿನಲ್ಲಿರಬೇಕು ಎಂದು ಹೇಳಲಾಗಿದೆ
ಊಟದ ಮನೆ ಪಶ್ಚಿಮದಲ್ಲಿದ್ದರೆ ಒಳ್ಳೆಯದು. ಅದು ಇಲ್ಲದಿದ್ದರೆ, ನೀವು ಅದನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬಹುದು
2024ರಲ್ಲಿ ಸಾಡೇ ಸಾತಿ ಕಾಟ ಕಡಿಮೆ ಆಗೋಕೆ ಈ ಪರಿಹಾರ ಮಾಡಿ
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ
ಆದ್ದರಿಂದ ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡಬಾರದು. ನೀವೇನಾದ್ರೂ ಹೀಗೆ ಮಾಡುತ್ತಿದ್ರೆ ಇಂದೇ ಊಟ ಮಾಡುವ ಸ್ಥಳವನ್ನು ಬದಲಿಸಿಕೊಳ್ಳಿ
ಯಮ ಸಾವಿನ ದೇವರು. ದಕ್ಷಿಣಾಭಿಮುಖವಾಗಿ ಆಹಾರ ಸೇವಿಸುವುದರಿಂದ ಪ್ರಾಣಹಾನಿಯಾಗುತ್ತದೆ. ಇಲ್ಲವೇ, ನೀವು ಅನೇಕ ರೀತಿಯ ಸಮಸ್ಯೆ ಕಾಡಬಹುದು
ಆದ್ದರಿಂದ ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ