ಈ ವೀಕೆಂಡ್ ಮಿಸ್ ಮಾಡ್ದೆ ಈ ಜಾಗಕ್ಕೆ ಹೋಗಿ!

ಅಯ್ಯನಕೆರೆ ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಜೀವ ಸೆಲೆ. ಇಲ್ಲಿಂದ ಹರಿಯುವ ಕಡೆ ಕಾಲುವೆ, ಊರ ಕಾಲುವೆ, ಬಸವನ ಕಾಲುವೆ, ಬ್ರಹ್ಮಸಮುದ್ರ ಕಾಲುವೆಗಳು ಕಡೂರು ತಾಲೂಕಿನ ಸುಮಾರು 1574 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿವೆ. 

ಕಟ್ಟೆಹೊಳೆಯೆಂದು ಇಲ್ಲಿಂದ ಹರಿಯುವ ನದಿ ಮುಂದೆ ವೇದಾನದಿಯಾಗಿ ಹರಿದು, ಆವತಿಯೊಂದಿಗೆ ಕುಂತಿಹೊಳೆಯ ಸಮೀಪ ಸೇರಿ ವೇದಾವತಿಯಾಗಿ ಚಿತ್ರದುರ್ಗವೆಂಬ ಕಗ್ಗಲ್ಲ ನಾಡಿಗೆ ಜೀವ ಚೈತನ್ಯವಾಗುತ್ತಿದೆ.

ಸಖರಾಯಪಟ್ಟಣದ ಈ ಅಯ್ಯನ ಕೆರೆ ಒಂದು ದಿನದ ಎಂಜಾಯ್‌ಗೆ ಬೆಸ್ಟ್ ಪ್ಲೇಸ್ ಅಂತಲೇ ಹೇಳಬಹುದು. ಯಾಕಂದ್ರೆ ಚಿಕ್ಕಮಗಳೂರು ನಗರದಿಂದ ಕೇವಲ 28 ಕಿ.ಮೀ ದೂರವಿರುವ ಈ ಕೆರೆಗೆ ಪ್ರತಿನಿತ್ಯ ನೂರಾರು ಜನ ಬರುತ್ತಲೇ ಇರುತ್ತಾರೆ. 

ಅದ್ರಲ್ಲೂ ಶನಿವಾರ, ಭಾನುವಾರ ಬಂತು ಅಂದ್ರೆ ಜನ ಸ್ವಲ್ಪ ಜಾಸ್ತಿನೇ ಬರ್ತಾರೆ. ಕೆರೆ ಕೊಡಿ ಬಿದ್ದ ಜಾಗದಲ್ಲಿ ಆಟ ಆಡಲು ಜಾಗವಿದ್ದು, ಇಂದಿಗೂ ನೀರು ಫಾಲ್ಸ್ ರೀತಿಯಲ್ಲಿ ಹರಿದು ಬರುತ್ತಿದೆ. ಹಾಗಾಗಿ ಜನ ಇಲ್ಲಿಗೆ ಶನಿವಾರ, ಭಾನುವಾರ ಬಂತು ಅಂದ್ರೆ ಮಿಸ್ ಮಾಡದೆ ಬರ್ತಾರೆ.

ಚಿಕ್ಕಮಗಳೂರು ನಗರದಿಂದ 28 ಕಿ.ಮೀ ದೂರವಿರುವ ಸಖರಾಯಪಟ್ಟಣಕ್ಕೆ ಸರ್ಕಾರಿ ಬಸ್ಸುಗಳು ಹಾಗೂ ಟ್ಯಾಕ್ಸಿಗಳು ಲಭ್ಯವಿವೆ. ಸಖರಾಯಪಟ್ಟಣದಿಂದ ಅಯ್ಯನಕೆರೆಗೆ ಆಟೋಗಳ ಮುಖಾಂತರ ಹೋಗಬಹುದು. 

ಇನ್ನು ಸ್ವಂತ ಕಾರು ಬೈಕ್‌ನಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಒಟ್ಟಿನಲ್ಲಿ ನೀವೇನಾದ್ರು ವೀಕೆಂಡ್ ಪ್ಲಾನ್ ಮಾಡ್ತಿದ್ರೆ ಒಂದ್ ಸಲ ಈ ಜಾಗಕ್ಕೆ ಹೋಗ್ ಬನ್ನಿ.

ಇನ್ನು ಸ್ವಂತ ಕಾರು ಬೈಕ್‌ನಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಒಟ್ಟಿನಲ್ಲಿ ನೀವೇನಾದ್ರು ವೀಕೆಂಡ್ ಪ್ಲಾನ್ ಮಾಡ್ತಿದ್ರೆ ಒಂದ್ ಸಲ ಈ ಜಾಗಕ್ಕೆ ಹೋಗ್ ಬನ್ನಿ.