ಚಪ್ಪಲಿಗಳ ವಿಷಯಕ್ಕೆ ಬಂದಾಗ ನಮ್ಮಲ್ಲಿ ಹೆಚ್ಚಿನವರು ಪಾದರಕ್ಷೆಯನ್ನು ಆಯ್ಕೆ ಮಾಡುವಾಗ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಪ್ರಸ್ತುತ ಉಡುಗೆಗೆ ಅನುಗುಣವಾಗಿ ಚಪ್ಪಲಿಗಳನ್ನು ಧರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಬಣ್ಣದಚಪ್ಪಲಿಗಳನ್ನು ಧರಿಸಿದರೆ ಬಡತನ ನಿಮ್ಮನ್ನು ಕಾಡುತ್ತದೆ ಎಚ್ಚರ.

ಕೆಂಪು, ಗುಲಾಬಿ ಮತ್ತು ಹಸಿರು ಬಣ್ಣದ ಚಪ್ಪಲಿಗಳನ್ನು ಬಳಸಿದರೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ.

ಈ ಬಣ್ಣದ ಚಪ್ಪಲಿಗಳಿಂದ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಕೂಡಾ ಹೆಚ್ಚು.

ಬೂದು, ನೀಲಿ ಮತ್ತು ಕಪ್ಪು ಬಣ್ಣದ ಚಪ್ಪಲಿಗಳನ್ನು ಧರಿಸಿದರೆ ನಿಮಗೆ ಒಳ್ಳೆಯದಾಗುತ್ತೆ.

ಇನ್ನು ಯಾವುದೇ ಸಂದರ್ಭದಲ್ಲೂ ಇತರರ ಚಪ್ಪಲಿಗಳನ್ನು ಧರಿಸಬಾರದು. ಇದರಿಂದ ನಷ್ಟವೇ ಹೊರತು ಲಾಭವಲ್ಲ.

ಮನೆಯಲ್ಲಿ ಪಾದರಕ್ಷೆಗಳನ್ನು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇಡಬಾರದು.

ಹಿಂದೂ ಸಂಪ್ರದಾಯದ ಪ್ರಕಾರ, ಮನೆಯ ಬಾಗಿಲನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮನೆಯಲ್ಲಿ ಕಬೋರ್ಡ್ ಗಳ ಕೆಳಗೆ ಚಪ್ಪಲಿಗಳನ್ನು ಇಡಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ.