ಸದ್ಯದಲ್ಲಿಯೇ ಸಂಕ್ರಾಂತಿ ಹಬ್ಬ ಹತ್ತಿರವಿದ್ದು, ಹಣ ವ್ಯರ್ಥ ಮಾಡದೇ ಮನೆಯಲ್ಲಿಯೇ ಸುಲಭವಾಗಿ ಎಳ್ಳುಂಡೆ ಮಾಡುವುದು ಹೇಗೆ ಎಂದು ನಾವಿಂದು ನಿಮಗೆ ತಿಳಿಸುತ್ತೇವೆ
ಅಲ್ಲದೇ ಎಳ್ಳು ಸೇವನೆಯು ಅನೇಕ ರೀತಿಯಲ್ಲಿ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ
ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಪುರಿ ಉಂಡೆ, ಎಳ್ಳುಂಡೆ, ಕಡಲೆ ಉಂಡೆ ಹೀಗೆ ಅನೇಕ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು
ಆದರೆ ಇತ್ತೀಚಿನ ದಿನಗಳಲ್ಲಿ ಈ ತಿಂಡಿಗಳನ್ನು ಮನೆಯಲ್ಲಿ ಮಾಡುವುದು ಬಹಳ ಕಡಿಮೆ ಆಗಿದ್ದು, ಜನ ಅಂಗಡಿಯಲ್ಲಿ ಖರೀದಿಸುತ್ತಾರೆ
ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?
ಆದರೆ ಸದ್ಯದಲ್ಲಿಯೇ ಸಂಕ್ರಾಂತಿ ಹಬ್ಬ ಹತ್ತಿರವಿದ್ದು, ಹಣ ವ್ಯರ್ಥ ಮಾಡದೇ ಮನೆಯಲ್ಲಿಯೇ ಸುಲಭವಾಗಿ ಎಳ್ಳುಂಡೆ ಮಾಡುವುದು ಹೇಗೆ ಎಂದು ನಾವಿಂದು ನಿಮಗೆ ತಿಳಿಸುತ್ತೇವೆ
ಅಲ್ಲದೇ ಎಳ್ಳು ಸೇವನೆಯು ಅನೇಕ ರೀತಿಯಲ್ಲಿ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ
ಎಳ್ಳುಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು: ತುರಿದ ತೆಂಗಿನಕಾಯಿ - 1, ಬೆಲ್ಲದ ಪುಡಿ - 150ಗ್ರಾಂ, ಶುದ್ಧ ಹಸುವಿನ ತುಪ್ಪ - 1 ಸ್ಪೂನ್, ಬಿಳಿ ಎಳ್ಳು - 20 ಗ್ರಾಂ
ಎಳ್ಳುಂಡೆ ಮಾಡುವ ವಿಧಾನ: ಮೊದಲು ಸ್ಟವ್ ಮೇಲೆ ಬಾಣಲಿ ಇಟ್ಟು ಅದಕ್ಕೆ ತುರಿದಿಟ್ಟುಕೊಂಡಿರುವ ತೆಂಗಿನಕಾಯಿಯನ್ನು ಹಾಕಿ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು
ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?
ನಂತರ ಇದನ್ನು ಕೆಳಗೆ ಮೊರದಲ್ಲಿ ಇಟ್ಟು, ಈಗ ಅದೇ ಪ್ಯಾನ್ಗೆ ತುಪ್ಪ ಹಾಕಿ
ಅದರೊಂದಿಗೆ ಬೆಲ್ಲದ ಪುಡಿಯನ್ನು ಸೇರಿಸಿ, ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಹುರಿಯಬೇಕು
ಒಟ್ಟಾರೆ ಈ ಎಲ್ಲಾ ಪದಾರ್ಥಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಹಾಗೂ ಇದರಲ್ಲಿರುವ ತೇವಾಂಶ ಸಂಪೂರ್ಣವಾಗಿ ಆವಿಯಾಗುವವರೆಗೂ ಉರಿದು, ಜೊತೆಗೆ ಇದರೊಳಗೆ ಎಳ್ಳನ್ನು ಸೇರಿಸಿ
ಕೊನೆಗೆ ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗೆ ತುಪ್ಪ ಸವರಿಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಮಾಡಿದರೆ ಎಳ್ಳುಂಡೆ ಸವಿಯಲು ಸಿದ್ಧ
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ