ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಮಾಸುವ ಮುನ್ನವೇ ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಸಡಗರ ಸಂಭ್ರಮದ ಉತ್ಸವ ಕಂಡು ಬಂತು
ಚಾಮುಂಡೇಶ್ವರಿ ತಾಯಿಗೆ ವೈಭವದ ರಥೋತ್ಸವ ನಡೆದು ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು
ಹೀಗೆ ಚಾಮುಂಡಿ ಬೆಟ್ಟದಲ್ಲಿ ದಸರಾದಷ್ಟೇ ಸಂಭ್ರಮ ಮತ್ತೆ ಕಂಡು ಬಂದಿದ್ದು ಭಕ್ತರು ಪುಳಕಿತರಾದರು
ಮೈಸೂರು ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬ ನಡೆದ ಎರಡನೇ ದಿನಕ್ಕೆ ಚಾಮುಂಡೇಶ್ವರಿ ರಥೋತ್ಸವವು ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿತು
ಅರಮನೆ ನಗರಿಯಲ್ಲಿ ರೇಷ್ಮೆ ಸೀರೆಯುಟ್ಟು ಮಿರಮಿರ ಮಿಂಚಿದ ಮಹಿಳೆಯರು!
ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದವು
‘ಬೆಳಗ್ಗೆ 7:50 ರಿಂದ 8:10 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಜವಂಶಸ್ಥರಾದ ಯದುವೀರ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು
ರಥೋತ್ಸವಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು
ಧಾರ್ಮಿಕ ಕೈಂಕರ್ಯಗಳನ್ನು ಕಂಡು ಭಕ್ತರು ಪುನೀತರಾದರು
ರಥ ಚಾಮುಂಡಿ ಬೆಟ್ಟದ ಸುತ್ತಲೂ ಒಂದು ಸುತ್ತು ಸುತ್ತುವ ವೇಳೆ 21 ಸುತ್ತು ಸಿಡಿ ಮದ್ದನ್ನ ಸಿಡಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು
ಇದಾದ ಬಳಿಕ ರಥಕ್ಕೆ ಭಕ್ತರು ಹಣ್ಣು ಎಸೆದು ಚಾಮುಂಡೇಶ್ವರಿ ತಾಯಿಗೆ ಜೈಕಾರ ಹಾಕಿ ರಥವನ್ನು ಎಳೆದು ಪುನೀತರಾದರು
ನಮ್ಮ ಮೆಟ್ರೋದ ಮತ್ತೊಂದು ಸಾಧನೆ; ಯಶಸ್ವಿ ಸುರಂಗ ಕೊರೆದು ಹೊರ ಬಂದ 'ರುದ್ರ'!