ಬ್ಯಾಟ್ ಬೀಸಿದ್ರೆ ಸಿಕ್ಸ್ ಫಿಕ್ಸ್, ಬೌಲರ್ ಎಸೆದ ಬೌಲ್‌ಗೆ ವಿಕೆಟ್ ಢಮಾರ್!
ವ್ಹೀಲ್ ಚೇರ್ ಮೇಲೆ ಕುಳಿತು ಬ್ಯಾಟ್ ಬೌಲ್ ಬೀಸ್ತಿರೋ ಇವರು ಸಾಮಾನ್ಯದವರಲ್ಲ, ಅಸಾಮಾನ್ಯ ಕ್ರಿಕೆಟ್ ಕಲಿಗಳು!
ಬೆಂಗಳೂರಿನ ದಿವ್ಯಾಂಗ ಮೈತ್ರಿ ಕ್ರೀಡಾ ಅಕಾಡೆಮಿ ವಿಶೇಷ ಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 3 ದಿನಗಳ ವ್ಹೀಲ್ ಚೇರ್ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಿತ್ತು
ಈ ಸರಣಿಯಲ್ಲಿ ದೈಹಿಕ ಕೊರತೆಯನ್ನೂ ಮೀರಿ ಅಬ್ಬರಿಸಿದರು ನೋಡಿ ವಿಶೇಷ ಚೇತನ ಕ್ರಿಕೆಟ್ ಪ್ರತಿಭೆಗಳು
ಈ ಸ್ಪೆಷಲ್ ಕ್ರಿಕೆಟ್ ಸರಣಿಯಲ್ಲಿ ಬೆಳಗಾವಿ ಬುಲ್ಸ್, ತುಮಕೂರು ಟೈಗರ್ಸ್, ಬೆಂಗಳೂರು ಈಗಲ್ಸ್, ಬಿಜಾಪುರ ಬ್ಲಾಸ್ಟರ್ಸ್ ಸೇರಿ ಒಟ್ಟು 4 ತಂಡಗಳು ಈ ಸರಣಿಯಲ್ಲಿ ಮಿಂಚಿದವು
ಪ್ರತೀ ತಂಡದಲ್ಲಿ 15 ಆಟಗಾರರಿದ್ದು, ತಮಿಳುನಾಡು, ಆಂಧ್ರ, ತೆಲಂಗಾಣ, ಹರಿಯಾಣ ಸೇರಿ ಹೊರ ರಾಜ್ಯದ ಆಟಗಾರರೂ ಸಹ ಭಾಗವಹಿಸಿದ್ದರು
ಥೇಟ್ IPL ಮಾದರಿಯಲ್ಲೇ ಆಟಗಾರರನ್ನು ಸಾಂಕೇತಿಕ ಹರಾಜಿನ ಮೂಲಕ ಆಯ್ಕೆ ಮಾಡಿ ತಂಡ ರಚಿಸಲಾಗಿತ್ತು
ದೈಹಿಕ ದೌರ್ಬಲ್ಯ ಪ್ರತಿಭೆಗೆ ಅಡ್ಡಿ ಆಗಲ್ಲ ಎಂಬ ಮಾತಿಗೆ ಸಾಕ್ಷಿಯಾದ ಈ ಟೂರ್ನಾಮೆಂಟ್‌ನಲ್ಲಿ ಸಾಗರ್ ಲಂಬಾಣಿ ನೇತೃತ್ವದ ಬಿಜಾಪುರ ಬ್ಲಾಸ್ಟರ್ಸ್ ತಂಡ ಫಸ್ಟ್ ಪ್ರೈಜ್ ಗೆದ್ದು 50 ಸಾವಿರ ಬಹುಮಾನವನ್ನು ಮುಡಿಗೇರಿಸಿಕೊಂಡಿತು.
ಸಾಗರ್ ಗೌಡ ಮುನ್ನಡೆಸಿದ ಬೆಂಗಳೂರು ಈಗಲ್ಸ್ ಟೀಮ್ 2ನೇ ಪ್ರಶಸ್ತಿಗೆ ಮುತ್ತಿಟ್ಟಿತು
ಕ್ರಿಕೆಟ್ ಕೇವಲ ಎಲ್ಲ ಸರಿ ಇದ್ದವರಿಗೆ ಮಾತ್ರ ಅಲ್ಲ, ನಮ್ಮಲ್ಲೂ ಅದ್ಭುತ ಪ್ರತಿಭೆ ಇದೆ, ಅವಕಾಶ ಕೊಟ್ಟು ನೋಡಿ ಎಂಬಂತೆ ವ್ಹೀಲ್ ಚೇರ್ ಕ್ರಿಕೆಟ್ ಪಟುಗಳು ಸಾಧಿಸಿ ತೋರಿಸಿದ್ರು
ಮೀನು ಮಾರುತ್ತಿದ್ದ ಅಮ್ಮನ ಬಳಿಗೆ ಹೋಗಿ ಸರ್ಪ್ರೈಸ್ ಕೊಟ್ಟ ದುಬೈಯ ಮಗ; ತಾಯಿಯ ರಿಯಾಕ್ಷನ್ ಹೇಗಿತ್ತು ನೋಡಿ