ಪೊರಕೆಗೆ ಬಿಳಿ ದಾರವನ್ನು ಕಟ್ಟಬೇಕು ಎಂದು ಹಿರಿಯರು ಹೇಳಿರುವುದನ್ನ ನೀವು ಕೇಳಿರಬಹುದು. ಇದನ್ನ ಕಟ್ಟುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ
ಪೊರಕೆಯಲ್ಲಿ ಲಕ್ಷ್ಮಿ ವಾಸ ಮಾಡುವುದರಿಂದ ಅದನ್ನ ತುಳಿಯಲು ಹೋಗಬಾರದು. ಅದನ್ನ ನೀವು ಮೆಟ್ಟಿದರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೇ, ಇದರಿಂದ ನಿಮಗೆ ಬಡತನ ಸಹ ವಕ್ಕರಿಸುತ್ತದೆ ಎನ್ನುವ ನಂಬಿಕೆ ಇದೆ
ಪೊರಕೆಯನ್ನು ನಾವು ಎಂದಿಗೂ ಎಸೆಯಬಾರದು. ಅದನ್ನ ಮನೆಯ ಒಳಗೆ ಸಹ ನೀಟಾಗಿ ಇಡಬೇಕಾಗುತ್ತದೆ. ಅದರಲ್ಲೂ ಶನಿವಾರದಂದು ಮಾತ್ರ ಪೊರಕೆಯನ್ನು ಮನೆಯಿಂದ ಹೊರಗೆ ಇಡಬೇಕು. ಹೀಗೆ ಮಾಡುವುದರಿಂದ ಬಡತನ ದೂರವಾಗುತ್ತದೆ
ಶುಕ್ರವಾರವನ್ನು ತಾಯಿ ಲಕ್ಷ್ಮಿಯ ದಿನವೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಈ ದಿನ ನೀವು ಪೊರಕೆ ಮೆಟ್ಟುವುದು, ಖರೀದಿ ಮಾಡುವುದು ಮಾಡಬಾರದು. ಅದರಲ್ಲೂ ಇದ್ದನ್ನ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಇಡಬಾರದು