ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಎಂದ ಗಾದೆ ಮಾತನ್ನು ನೀವು ಕೇಳಿರಬಹುದು
ಆದರೆ ಊಟ ಮಾಡುವಾಗ ಮಾತನಾಡಬಾರದು ಎಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರಬಹುದು
ಏಕೆಂದರೆ ನಾವೆಲ್ಲರೂ ಊಟ ಮಾಡುವ ನಿಜವಾದ ರೀತಿಯನ್ನು ಅರ್ಥ ಮಾಡಿಕೊಂಡರೆ ಬಹುತೇಕ ಹೆಚ್ಚು ಕಾಲ ಆರೋಗ್ಯವಾಗಿ ಉಳಿಯುತ್ತೇವೆ
ಹಾಗಾದ್ರೆ ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ
ಇನ್ನು ಮುಂದೆ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!
ಊಟ ಮಾಡುವಾಗ ಅನುಸರಿಸಬೇಕಾದ ಅನೇಕ ನಿಯಮಗಳಿವೆ. ಈ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲೂ ಉಲ್ಲೇಖಿಸಲಾಗಿದೆ
ಆದರೆ ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಮಾತನಾಡದೇ ಊಟ ಮಾಡುವುದರಿಂದ ಆಹಾರವನ್ನು ಸಂಪೂರ್ಣವಾಗಿ ಅಗಿಯುತ್ತೇವೆ. ಹೀಗೆ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಲಾಭ ಸಿಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಪ್ರತಿದಿನ ಸೇವಿಸುವ ಆಹಾರವನ್ನು ದೇವರು ನಮಗೆ ನೀಡಿದ ಪ್ರಸಾದವೆಂದು ಪರಿಗಣಿಸಲಾಗಿದೆ
ಹಾಗಾಗಿ ಊಟ ಮಾಡುವಾಗ ಅನವಶ್ಯಕ ವಿಷಯಗಳ ಬಗ್ಗೆ ಮಾತನಾಡದೇ ಆಹಾರದತ್ತ ಗಮನ ಹರಿಸಬೇಕು. ಅದು ದೇವರಿಗೆ ನಮ್ಮ ಕೃತಜ್ಞತೆಯ ಋಣವೆಂದು ಪರಿಗಣಿಸಲಾಗಿದೆ
ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ನೀವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಶಕ್ತಿ ಬೇಕಾಗುತ್ತದೆ. ಆದರೆ ಮಾತನಾಡುತ್ತಾ ಊಟ ಮಾಡಿದರೆ ಶಕ್ತಿ ಕಡಿಮೆ ಆಗುತ್ತದೆ ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗುವುದಿಲ್ಲ
ಹಾಗಾಗಿ ಊಟ ಮಾಡುವಾಗ ಮಾತನಾಡಬಾರದು ಎಂದು ಹೇಳಲಾಗುತ್ತದೆ
ನಿಧಾನವಾಗಿ ಮಾತನಾಡುತ್ತಾ ಊಟ ಮಾಡುವಾಗ ತರಾತುರಿಯಲ್ಲಿ ತಿನ್ನುತ್ತೀರಿ
ಇದರಿಂದ ಆಹಾರ ಅಗಿಯುವುದನ್ನು ಮರಿಯುತ್ತೀರಾ. ನಂತರ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತೀರಿ