ವಿಶ್ವವಿಖ್ಯಾತ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗ ಮತ್ತೆ ಕಾಣಿಸಿಕೊಂಡಿದೆ

ಕರ್ನಾಟಕದ ಊಟಿ ಎಂದೇ ಖ್ಯಾತಿಗೊಂಡಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಕಾಡಾನೆ  ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ

ಚಾಮರಾಜನಗರ ಜಿಲ್ಲೆ ಬಂಡೀಪುರ ವ್ಯಾಪ್ತಿಯಲ್ಲಿರುವ ಪ್ರಸಿದ್ದ ದೇವಾಲಯಕ್ಕೆ 4 ವರ್ಷದಿಂದ ಒಂಟಿ ಸಲಗವೊಂದು ಪ್ರತಿನಿತ್ಯ ಆಗಮಿಸುತ್ತಿತ್ತು, 

ದಿನಂಪ್ರತಿ ಸಂಜೆಯಾಗುತ್ತಲೇ ಕಾಡಾನೆಯ ದರ್ಶನ ಭಕ್ತರಿಗೆ ಆಗುತ್ತಿತ್ತು

ಹೀಗಾಗಿ ಈ ಒಂಟಿ ಸಲಗ ಭಕ್ತರ ವಲಯದಲ್ಲಿ ಗೋಪಾಲನ ಭಕ್ತ ಎಂದೇ ಖ್ಯಾತಿ ಪಡೆದಿತ್ತು

ಆದರೆ ಒಂದು ವರ್ಷದಿಂದ ಈ ಕಾಡಾನೆ ಹಿಮವದ್ ಗೋಪಾಲಸ್ವಾಮಿ ದೇಗುಲದ ಆವಾರದಲ್ಲಿ ಕಾಣಿಸಿಕೊಂಡಿರಲಿಲ್ಲ

ಆಶ್ಚರ್ಯ ಎಂಬಂತೆ ಇದೀಗ ಮತ್ತೆ ದೇವಾಲಯದ ಪ್ರಾಂಗಣಕ್ಕೆ ಒಂಟಿ ಸಲಗ ಆಗಮಿಸಿದೆ

ದೇವಾಲಯದ ಸುತ್ತ ಸಂಜೆ ವೇಳೆ ಪ್ರದಕ್ಷಿಣೆ ಹಾಕುವ ಒಂಟಿ ಸಲಗವನ್ನು ನೋಡಿ ಅಪಾಯವನ್ನು ಸಹ ಲೆಕ್ಕಿಸದೇ ಭಕ್ತರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ

ಮಕ್ಕಳು ಆನೆ ಬಳಿ ಹೊಗಲು ಭಯ ಪಡದಿರುವುದನ್ನು ನೀವಿಲ್ಲಿ ನೋಡಬಹುದು

Farmers Idea: ಹೀಗೆ ಮಾಡಿದ್ರೆ ಪ್ರಾಣಿಗಳು ಬೆಳೆಯ ಬಳಿಗೂ ಬರಲ್ಲ!