ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ, ನಿರ್ಮಾಪಕ ರಾಮೋಜಿ ರಾವ್ ನಿಧನ

ಹೈದರಾಬಾದ್ ಫಿಲ್ಮ್‌ಸಿಟಿ ಮುಖ್ಯಸ್ಥ ಮತ್ತು ಈಟಿವಿ ಮಾಲೀಕ ರಾಮೋಜಿ ರಾವ್ ನಿಧನರಾಗಿದ್ದಾರೆ.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಜೂನ್ 8 ರಂದು ಅಂದರೆ ಶನಿವಾರ ಬೆಳಿಗ್ಗೆ 4.50 ಕ್ಕೆ ನಿಧನರಾಗಿದ್ದಾರೆ.

ಅವರು ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರು.

ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲಂ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.

ರಾಮೋಜಿ ರಾವ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಮೋಜಿ ರಾವ್ ಪದ್ಮವಿಭೂಷಣ ಪುರಸ್ಕೃತರಾಗಿದ್ದರು.

ಅವರು ಕೆಲವು ವರ್ಷಗಳ ಹಿಂದೆ ಕರುಳಿನ ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದರು.

ರಾಮೋಜಿ ಅವರು ತೆಲುಗು ಚಲನಚಿತ್ರೋದ್ಯಮ, ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ವಿಶ್ವದ ಅತಿ ದೊಡ್ಡ ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದ್ರು.