ಬುಧವಾರ ಮತ್ತು ಸಂಕಷ್ಟಿಯ ದಿನ ಗರಿಕೆ ಇಟ್ಟು ಗಣೇಶನನ್ನು ಪೂಜಿಸಿದರೆ ಬೇಡಿದ ವರ ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ಗಣೇಶನನ್ನು ಮೆಚ್ಚಿಸಬಹುದು ಎಂಬ ನಂಬಿಕೆಯಿದೆ
ಒಂದು ಕಾಲದಲ್ಲಿ ಅನಲಾಸುರ ರಾಕ್ಷಸನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದ್ದ. ಅವನ ಕಣ್ಣಿನಿಂದ ಬರುವ ಬೆಂಕಿಯು ಎಲ್ಲವನ್ನು ಸುಟ್ಟು ಹಾಕುತ್ತಿತ್ತು. ದೇವನಾದ ಗಣೇಶನ ಬಳಿ ದೇವತೆಗಳು ಸಹಾಯಕ್ಕೆ ಬಂದರು. ಆಗ ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ
ಬುಧ ದೋಷ ಪರಿಹಾರಕ್ಕೂ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ. ಗರಿಕೆ ದೇವ ತತ್ವಗಳಾದ ಶಿವ, ಶಕ್ತಿ ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ ಮತ್ತು ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ