ಗಂಗೆ ತಂದ ಶಿರಸಿಯ ಗೌರಿ ಸ್ವಂತ ಹಣದಲ್ಲಿ ತಾವೇ ತೋಡಿದ ಬಾವಿಗೆ ಕಟ್ಟೆಯನ್ನೂ ಕಟ್ಟಿಸಿದ್ರು!

ಸ್ವಂತ ಖರ್ಚಿನಲ್ಲಿ 130 ಜಂಬಿಟ್ಟಿಗೆ ಕಲ್ಲನ್ನು 300 ಮೀಟರ್ ದೂರದ ತಮ್ಮ ಮನೆಯಿಂದ ಹೊತ್ತು ತಂದು ಕಟ್ಟೆ ನಿರ್ಮಿಸಿದರು.

ತಮಗೆ ಬಂದಂತಹ 10,000 ರೂಪಾಯಿ ಪುರಸ್ಕಾರದ ಹಣವನ್ನೂ ಈ ಮಹಾತಾಯಿ ಕಬ್ಬಿಣದ ಮುಚ್ಚಳ ಬಾವಿಗೆ ಹಾಕಿಸಿ ಪೂರೈಸಿದ್ದಾರೆ.

ಹೌದು 60 ವರ್ಷದ ಗೌರಿ ನಾಯ್ಕ್ ಶಿರಸಿಯ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೆಗೆದದ್ದು ದೊಡ್ಡ ಸುದ್ದಿಯಾಗಿತ್ತು.

ಅಧಿಕಾರಿಗಳು ಹಾಗೂ ಕೆಲವರು ಬಾವಿಯಿಂದ ಮಕ್ಕಳಿಗೆ ಅಪಾಯ ಎಂದು ಪದೇ ಪದೇ ಬಾವಿ ಕಾರ್ಯಕ್ಕೆ ತಡೆ ಒಡ್ಡಿದ್ದರು.

ಹಾಗೆ ತಡೆ ಒಡ್ಡಿದ ಮೇಲೂ ಕೂಡ ಛಲಗಿಡದ ಗೌರಿ ಬಾವಿಯನ್ನು ನಿರ್ಮಿಸಿ ಗಂಗೆಯನ್ನು ತಂದೇಬಿಟ್ಟರು.

60 ಅಡಿ ಬಾವಿಯಲ್ಲಿ 7 ಅಡಿ ನೀರು ಈ ಬಿರು ಬೇಸಿಗೆಯಲ್ಲೂ ಇದೆ.

ಅಂಗನವಾಡಿ ಮಕ್ಕಳಿಗೆ ಕುಡಿಯಲು, ಅಡುಗೆ ಮಾಡಲು, ಇದೇ ನೀರು ಬಳಕೆಯಾಗುತ್ತಿದೆ.

ಈ ಬಿಸಿ ಹವೆಯ ನಡುವೆ ಗೌರಮ್ಮನ ಬಾವಿ ಎಷ್ಟೋ ಜನರ ದಾಹ ತಣಿಸುತ್ತಿದೆ.

ಗೌರಮ್ಮ ಅವರಿಗೆ ನಮ್ಮ ಕಡೆಯಿಂದ ಹೃತ್ಪೂರ್ವಕ ನಮಸ್ಕಾರ.