ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಿರರ್ ಕ್ಲೀನರ್ಗಳನ್ನು ಕನ್ನಡಿ ಸ್ವಚ್ಛಗೊಳಿಸಲು ಬಳಸುತ್ತಾರೆ

ಆದರೆ ಇದು ತುಂಬಾ ದುಬಾರಿ ಆಗಿರುತ್ತದೆ. ಹಾಗಾಗಿ ಕನ್ನಡಿಯನ್ನು ಸ್ವಚ್ಛವಾಗಿಡಲು ಉತ್ತಮ ಮತ್ತು ಅಗ್ಗದ ಮನೆಮದ್ದು ಯಾವುದು ಎಂಬುವುದರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ಓದಿ

ಸಾಮಾನ್ಯವಾಗಿ ಆಗಾಗ ಮನೆಯ ಪೀಠೋಪಕರಣಗಳು, ಟೈಲ್ಸ್, ಸ್ಕ್ರೀನ್ಗಳು ಹೀಗೆ ಇತ್ಯಾದಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತಲೇ ಇರುತ್ತೇವೆ

ಆದರೆ ಮನೆಯ ಮೂಲೆಯಲ್ಲಿ ಬಿದ್ದಿರುವ ಕನ್ನಡಿಯನ್ನು ನಾವು ಮರೆತು ಬಿಡುತ್ತೇವೆ

ನೀವು ಫೇಮಸ್​ ವ್ಯಕ್ತಿಯಾಗಬೇಕಾ? ಮೊದಲು ಈ ಅಭ್ಯಾಸಗಳಿಗೆ ಗುಡ್​ ಬಾಯ್​ ಹೇಳಿ

ಅನೇಕ ಬಾರಿ ನಾವು ಎಷ್ಟೇ ಸ್ವಚ್ಛಗೊಳಿಸಿದರೂ ಕನ್ನಡಿ ಮೇಲಿನ ಕಲೆಗಳು ಹೋಗುವುದಿಲ್ಲ

ಇದರಿಂದ ಕನ್ನಡಿಯಲ್ಲಿ ಮುಖ ಕಾಣಿಸುವುದಿಲ್ಲ. ಹಾಗಾಗಿ ನಾವಿಂದು ನಿಮ್ಮ ಮನೆಯಲ್ಲಿರುವ ಹಳೆಯ ಕೊಳಕಾಗಿರುವ ಕನ್ನಡಿಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಸುತ್ತೇವೆ

ನ್ಯೂಸ್ ಪೇಪರ್ ಬಳಸಿ: ಕನ್ನಡಿಯನ್ನು ಸ್ವಚ್ಛಗೊಳಿಸಲು ನೀವು ಬಟ್ಟೆಯ ಬದಲಿಗೆ ನ್ಯೂಸ್ ಪೇಪರ್ ಬಳಸಿ

 ಇದು ಗಾಜಿನ ಮೇಲೆ ಸಂಗ್ರಹವಾದ ತೇವಾಂಶವನ್ನು ಸುಲಭವಾಗಿ ತೆಗೆದು ಹಾಕುತ್ತದೆ

ಪ್ರಯಾಣಿಕರಿಗೆ ಗುಡ್‍ನ್ಯೂಸ್, ಬಿಎಂಟಿಸಿ ಬಸ್ ಈ ರೂಟ್‍ನಲ್ಲೂ ಬರುತ್ತೆ!

ಟಾಲ್ಕಮ್ ಪೌಡರ್: ಟಾಲ್ಕಮ್ ಪೌಡರ್ ಸಹಾಯದಿಂದಲೂ ನೀವು ಕನ್ನಡಿಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಬಹುದು

ಬಿಳಿ ವಿನೆಗರ್: ಕನ್ನಡಿ ತುಂಬಾ ಕೊಳಕಾಗಿದ್ದರೆ, ಒಂದು ಚಮಚ ಬೆಚ್ಚಗಿನ ನೀರಿಗೆ ಬಿಳಿ ವಿನೆಗರ್ ಅನ್ನು ಸೇರಿಸಿ, ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಿ

ಗಾಜಿನ ಮೇಲೆ ಸಿಂಪಡಿಸಿ. ನಂತರ ಕಾಗದದಿಂದ ಗಾಜನ್ನು ಸ್ವಚ್ಛಗೊಳಿಸಿ

ನಿಂಬೆ ರಸ: ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿ. ಬಳಿಕ ಇದನ್ನು ಕನ್ನಡಿಯ ಮೇಲೆ ಸಿಂಪಡಿಸಿ, ಫೈಬರ್ ಟವೆಲ್ನಿಂದ ಒರೆಸಿ. ಆಗ ಕನ್ನಡಿ ಮೇಲಿನ ಕಲೆಗಳು ಮಾಯವಾಗುತ್ತದೆ

ಚಳಿಗಾಲದಲ್ಲಿ ಈ ಕಾರಣಕ್ಕೆ ನೀವು ನುಗ್ಗೆಸೊಪ್ಪು ತಿನ್ನಲೇಬೇಕು!