ಚಿನ್ನ, ಬೆಳ್ಳಿಗಳಿಂದ ಸರ, ಓಲೆ ತಯಾರಿಸುವುದು ಕಾಮನ್‌. ಆದ್ರಿಲ್ಲಿ ಜೇಡಿ ಮಣ್ಣು ಬಳಸಿ ಅದೆಂತಹಾ ಸೂಪರ್‌ ಆಗಿರೋ ಆಭರಣ ತಯಾರಿಸಿದ್ದಾರೆ ನೋಡಿ

ಅರೆ! ಹೀಗೂ ಸಾಧ್ಯನಾ ಅಂತಾ ಕೇಳ್ತೀರ. ನಿಜ, ಇಲ್ಲಿ ನೋಡ್ತಿದ್ರೆ ನೀವ್‌ ಅದನ್ನ ನಂಬ್ಲೇಬೇಕು

 ಜೇಡಿ ಮಣ್ಣಿನ ಈ ಉಪಯೋಗ ನೀವೆಲ್ಲ ತಿಳಿದುಕೊಳ್ಳಲೇಬೇಕು

ಯೆಸ್‌, ಇವರು ಮೈಸೂರಿನ ಜೆಎಸ್‌ಎಸ್‌ ವಿದ್ಯಾಸಂಸ್ಥೆಯ ಉಪನ್ಯಾಸಕಿ ಲತಾ. ಆದರೆ, ಪ್ರವೃತ್ತಿಯಲ್ಲಿ ಇವರು ಜೇಡಿ ಮಣ್ಣಿನ ಓಲೆ, ಸರಗಳ ತಯಾರಕಿ

ಆ ಮೂಲಕ ಭಾರೀ ಆಕರ್ಷಣೆಯ ಕಲರ್‌ಫುಲ್‌ ಆಭರಣಗಳನ್ನ ತಯಾರಿಸಬಲ್ಲರು

ಹೀಗೆ ಹರಪ್ಪ, ಮೊಹೆಂಜೊದಾರೋ ನಾಗರಿಕತೆಯ ಸಮಯದಲ್ಲಿ ಬಳಸುತ್ತಿದ್ದ ಜೇಡಿ ಮಣ್ಣಿನ ಪರಿಕರಗಳನ್ನು ಲತಾ ಅವರು ಈಗಲೂ ಬಳಸುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ

ಲತಾ ಅವರು ಇದಕ್ಕಾಗಿ ಯಾವುದೇ ವಿಶೇಷ ತರಬೇತಿಯನ್ನ ಪಡೆದಿಲ್ಲ. ಕಳೆದ 10 ವರ್ಷಗಳಿಂದ ಇದನ್ನ ತಯಾರಿಸುತ್ತ ಬಂದಿದ್ದಾರೆ

ಜೇಡಿಮಣ್ಣಿನ ಸರ, ಓಲೆಗಳನ್ನು ಧರಿಸುವುದರಿಂದ ಆರೋಗ್ಯಕ್ಕೂ ಉತ್ತಮ ಹಾಗೂ ದೇಹದ ಉಷ್ಣಾಂಶವನ್ನು ಅದು ಕಡಿಮೆ ಮಾಡುತ್ತದೆ. ಜೊತೆಗೆ ಇದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಒಟ್ಟಿನಲ್ಲಿ ಜೇಡಿಮಣ್ಣಿನಲ್ಲಿ ಆಭರಣ ತಯಾರಿಸುವ ಮೂಲಕ ಲತಾ ಅವರು ನಿಜಕ್ಕೂ ವಿಶಿಷ್ಟ ಸಾಧನೆಯನ್ನೇ ಮೆರೆದಿದ್ದಾರೆ

ನಿಮಗೂ ಜೇಡಿಮಣ್ಣಿನ ಈ ಸುಂದರ ಆಭರಣಗಳು ಬೇಕಿದ್ದರೆ ಲತಾ ಅವರ ಮೊಬೈಲ್‌ ಸಂಖ್ಯೆ 9620471088 ಸಂಪರ್ಕಿಸಬಹುದಾಗಿದೆ

ಈ ಜಿಲ್ಲೆಗಳಲ್ಲಿ ಕಡಲೆ ಖರೀದಿ ಕೇಂದ್ರ ಆರಂಭ, ಈಗ ಮಾರಾಟ ಮಾಡಿದ್ರೆ ಲಾಸ್ ಆಗುವ ಭಯದಲ್ಲಿ ಕೃಷಿಕರು