ವಿಶ್ವದ ಶ್ರೀಮಂತ ದೇವರು ತಿಮ್ಮಪ್ಪನ ದರ್ಶನಕ್ಕೆ ಕೆಜಿಗಟ್ಟಲೇ ಬಂಗಾರ ಧರಿಸಿ ಬಂದ ಗೋಲ್ಡನ್ ಫ್ಯಾಮಿಲಿ!
ತಿಮ್ಮಪ್ಪನ ದರ್ಶನಕ್ಕೆ ಬಂದ ಈ ಕುಟುಂಬ ಬರೋಬ್ಬರಿ 25 ಕೆಜಿ ಚಿನ್ನಾಭರಣ ಧರಿಸಿ ಬಂದಿದ್ದರಂತೆ
ಇದೇ ಕಾರಣಕ್ಕೆ ಏನೋ ಖಾಸಗಿ ಸೆಕ್ಯೂರಿಟಿ ಸಿಬ್ಬಂದಿಯನ್ನು ಜೊತೆಗೆ ಕರೆತಂದಿದ್ದರು.
ಈ ಕುಟುಂಬ ಮಹಾರಾಷ್ಟ್ರ ನಿವಾಸಿಗಳಾಗಿದ್ದು, ಮೈ ಮೇಲೆ ಕೆಜಿ ಗಟ್ಟಲೇ ಚಿನ್ನಾಭರಣ ಧರಿಸಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದರು.
ಕೆಜಿಗಟ್ಟಲೇ ಚಿನ್ನಧರಿಸಿ ಬಂದ ಈ ಕುಟುಂದ ಕೆಲ ಸಮಯ ಎಲ್ಲರ ಗಮನವನ್ನು ಸೆಳೆದರು ಅಂತ ಹೇಳಬಹುದು.
ಚಿನ್ನದ ಲೇಪಿತ ಕಾರಿನಲ್ಲಿ ತಿರುಮಲಕ್ಕೆ ಬಂದು ಶ್ರೀವಾಣಿ ಟ್ರಸ್ಟ್‌ಗೆ ಕಾಣಿಕೆ ಅರ್ಪಿಸಿದ್ದಾರೆ.
ಈ ಕುಟುಂಬ ತಿರುಮಲ ಶ್ರೀಗಳ ದರ್ಶನಕ್ಕೆ ಬಂದ ವೇಳೆ ಸಾಮಾನ್ಯ ಭಕ್ತರಂತೆ ಕಾಣದೆ ವಿಚಿತ್ರವಾಗಿ ಕಾಣುತ್ತಿದ್ದರು.
ಈ ಕುಟುಂಬವನ್ನು ಪುಣೆ ಮೂಲದ ಗೋಲ್ಡಮನ್ಸ್ ಎಂದು ಗುರುತಿಸಲಾಗಿದೆ.
ಖಾಸಗಿ ಭದ್ರತೆಯೊಂದಿಗೆ ಬಂದ ಭಕ್ತರು ತಿರುಮಲಕ್ಕೆ ಭೇಟಿ ನೀಡಿ ವಾಪಸ್ ಪ್ರಯಾಣ ಬೆಳೆಸಿದರು.
ಮಹಾರಾಷ್ಟ್ರದ ಸೋನಿ ಕುಟುಂಬ ಸ್ವಾಮಿಯವರ ದರ್ಶನಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು.