ಬೆಂಗಳೂರು ಹಾಗೂ ಹುಬ್ಬಳ್ಳಿ ಪ್ರಯಾಣಿಕರಿಗೆ ಸಿಹಿ ಸುದ್ಧಿ
ನವೆಂಬರ್ 20 ರಿಂದ ಓಡಾಟ ಸ್ಥಗಿತಗೊಳಿಸಿದ್ದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮತ್ತೆ ಓಡಾಟ ಆರಂಭಿಸಲಿದೆ
ಕಳೆದ ವಾರದವಷ್ಟೇ ಸ್ಥಗಿತವಾಗಿದ್ದ ಶ್ರೀಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣ-ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬೆಂಗಳೂರು ಸೂಪರ್ ಫಾಸ್ಟ್ ರೈಲು ಮತ್ತೆ ಓಡಾಟ ಮುಂದುವರೆಸಲು
ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಕಳೆದ ನವೆಂಬರ್ 20 ರಿಂದ ಮುಂದಿನ ಆದೇಶದವರೆಗೂ ರೈಲು ಸ್ಥಗಿತಗೊಳಿಸುವುದಾಗಿ ನೈಋತ್ಯ ರೈಲ್ವೆ ವಲಯವು ಘೋಷಿಸಿತ್ತು
ಹೊಸ ಮಾರ್ಗಗಳಲ್ಲಿ ಫೀಡರ್ ಬಸ್ ಆರಂಭಿಸಿದ BMTC, ಇಲ್ಲಿದೆ ವಿವರ
ಅದರಂತೆ ಬೆಂಗಳೂರು-ಹುಬ್ಬಳ್ಳಿ ನಡುವೆ ನವೆಂಬರ್ 20 ರಿಂದ ಹಾಗೂ ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ನವೆಂಬರ್ 21 ರಿಂದ ಓಡಾಟ ಸ್ಥಗಿತಗೊಳಿಸಿತ್ತು
ಇದೀಗ ಮತ್ತೆ ಜನರ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮರು ಓಡಾಟ ಆರಂಭಿಸಲು ನಿರ್ಧರಿಸಲಾಗಿದೆ
ಅದರಂತೆ ನವೆಂಬರ್ 30 ರಿಂದಲೇ ಮತ್ತೆ ಓಡಾಟ ಎಂದಿನಂತೆ ಅದೇ ಸಮಯಕ್ಕೆ ನಡೆಸಲಿರುವುದಾಗಿ ನೈಋತ್ಯ ರೈಲ್ವೆ ವಲಯವು ತಿಳಿಸಿದೆ. ಇದು ಕೂಡಾ ತಾತ್ಕಾಲಿಕ ಆಧಾರದಲ್ಲಿಯೇ ಓಡಾಟ ನಡೆಸಲಿದೆ
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ ರೈಲು ನವೆಂಬರ್ 30 ರ ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ಬೆಂಗಳೂರು ತಲುಪಲಿದೆ
ಈ ರೈಲು ಫೆಬ್ರವರಿ 29, 2024 ರವರೆಗೆ ಓಡಾಟ ನಡೆಸಲಿದೆ. ಇನ್ನು ನವೆಂಬರ್ 30 ರಾತ್ರಿ 11.55ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿ ತಲುಪಲಿದೆ
ಈ ರೈಲು ಸದ್ಯದ ಆದೇಶ ಪ್ರಕಾರ ಮಾರ್ಚ್ 1, 2024 ರವರೆಗೆ ಓಡಾಟ ನಡೆಸಲಿದೆ
ಬೆಳಗಾವಿಗೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ ಖಚಿತ