ಮದುವೆಯಾದವರಿಗೆ ಈ ದೇಶದಲ್ಲಿ ಬಂಪರ್, ಸರ್ಕಾರವೇ ಕೊಡುತ್ತೆ 31 ಲಕ್ಷ ರೂಪಾಯಿ!
ಸರ್ಕಾರವು ದಂಪತಿಗಳಿಗೆ ರೊಮ್ಯಾನ್ಸ್ ಮಾಡಲು ಡೆಸ್ಟಿನೇಷನ್ ಟೂರ್ ಅಥವಾ ಹಣವನ್ನು ನೀಡುತ್ತದೆ.
ಅದೊಂದು ದೇಶ ಮಾತ್ರ ಹೊಸದಾಗಿ ಮದುವೆಯಾದ ದಂಪತಿಗೆ ಸರ್ಕಾರ 31 ಲಕ್ಷ ರೂಪಾಯಿ ನೀಡುತ್ತಿದೆ.
ದಕ್ಷಿಣ ಕೊರಿಯಾ ಈ ದೇಶವು ವಿಶ್ವದ ಅತ್ಯಂತ ಕಡಿಮೆ ಜನನ ದರದ ಬಿಕ್ಕಟ್ಟಿನ್ನು ಎದುರಿಸುತ್ತಿದೆ.
ಜನಸಂಖ್ಯೆಯ ಸಮಸ್ಯೆಯನ್ನು ನಿಭಾಯಿಸಲು, ಸರ್ಕಾರವು ಸಾರ್ವಜನಿಕರಿಗೆ ಹಣವನ್ನು ನೀಡಲು ಪ್ರಾರಂಭಿಸಿದೆ.
ಜನನ ಪ್ರಮಾಣ ಹೆಚ್ಚಾಗಲು ಕೊರಿಯಾ ಸರ್ಕಾರವು ಜನರನ್ನು ಮದುವೆಯಾಗಲು ಪ್ರೋತ್ಸಾಹಿಸಬೇಕು.
ನವವಿವಾಹಿತ ದಂಪತಿಗಳಿಗೆ ಸರ್ಕಾರವು ಅಂದಾಜು 31 ಲಕ್ಷ ($ 38,000) ನೀಡುತ್ತಿದೆ ಎಂದು ಹೇಳಲಾಗಿದೆ.
ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ.
ವಿವಾಹವಾಗಲು ಮತ್ತು ಮಕ್ಕಳನ್ನು ಹೊಂದಲು ದಂಪತಿಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.
ಇಲ್ಲಿಯ ಕೇಂದ್ರ ಸರ್ಕಾರಗಳು ಜನನ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಯೋಜನೆಗಳೊಂದಿಗೆ ಬರುತ್ತಿವೆ.