ಚೆಂದುಳ್ಳಿ ಚೆಲುವೆಯರ ತಲೆಗೂದಲಿಗೆ ಅಂದದ ಸಿಂಗಾರ. ಕಪ್ಪು ಕೇಶರಾಶಿಯ ನಡುವೆ ಕಂಗೊಳಿಸೋ ಬಣ್ಣ ಬಣ್ಣದ ದಾರಗಳ ಚಿತ್ತಾರ
ಹೀಗೆ ಗೋವಾ ಬೀಚ್‌ನಲ್ಲಿ ಮೋಡಿ ಮಾಡೋ ಈ ಈ ಹೇರ್ ಬ್ರೈಡ್ ಹುಡ್ಗೀರಿಗಂತೂ ಸಖತ್ ಫೇವರಿಟ್
ಹೌದು, ಗೋವಾ ಅಂದ್ರೆ ಬೀಚು, ಲಿಕ್ಕರ್, ಪ್ರವಾಸೋದ್ಯಮಕ್ಕೆ ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ ಈ ಹೇರ್ ಬ್ರೈಡ್
ಹುಡ್ಗೀರಂತೂ ಗೋವಾದ ಬೀಚ್ ಗಳಿಗೆ ಪ್ರವಾಸಕ್ಕೆ ಹೋದ್ರೆ ಈ ಹೇರ್ ಬ್ರೈಡ್ ಮಾಡಿಸದೆ ವಾಪಸ್ಸು ಆಗೋದೆ ಕಡಿಮೆ
ವಿಜೃಂಭಣೆಯ ಭಜನಾ ಉತ್ಸವ, ಇಲ್ಲಿ ನಡೆಯೋ ಸಂತೆ ಸಹ ಒಂದು ವಿಶೇಷ!
ಇದನ್ನೂ ಓದಿ
ನೀಳ ಕೂದಲಿಗೆ ಎರಡ್ಮೂರು ಬಣ್ಣದ ದಾರಗಳನ್ನ ಸಮನಾದ ಸುರಳಿಯಾಗಿ ಕಟ್ಟಿ ನೇತು ಬಿಟ್ಟರೆ ಆಗ ಹೇರ್ ಸ್ಡೈಲ್ ಗೆ ಬರೋ ಲುಕ್ಕೇ ಬೇರೆ
ಈ ಹೇರ್ ಬ್ರೈಡ್ ಫೊಟೊಶೂಟ್ ಗೆ ಬ್ಯೂಟಿಫುಲ್ ಲುಕ್ ಕೊಡೋದ್ರಿಂದ ಹೆಚ್ಚಿನ ಹೆಣ್ಣುಮಕ್ಕಳು ಈ ಹೇರ್ ಬ್ರೈಡ್ ನ ಇಷ್ಟಪಡ್ತಾರೆ
ಬ್ಯೂಟಿ ಪಾರ್ಲರ್ ಗಳಲ್ಲಿ ಈ ಹೇರ್ ಬ್ರೈಡ್ ಗೆ ದರ ಹೆಚ್ಚಿದ್ದು, ಈ ರೀತಿ ದಾರಗಳನ್ನ ಸುರುಳಿ ಸುತ್ತಿ ಹೇರ್ ಬ್ರೈಡ್ ಹಾಕೋರ ಸಂಖ್ಯೆನೂ ಕಡಿಮೇನೆ
ಆದ್ರೆ ಗೋವಾದ ಬೀಚ್ ಗಳಲ್ಲಿ ಸಿಗುವ ಉತ್ತಕರ್ನಾಟಕ, ಗುಜರಾತ್ ಭಾಗದ ಮಹಿಳೆಯರು ಸರಸರನೆ ಸಲೀಸಾಗಿ ಕೂದಲಿಗೆ ಈ ಬಣ್ಣದ ದಾರಗಳನ್ನ ನೇಯ್ಗೆ ಹಾಕುತ್ತಾರೆ
ಕೊತ್ತಂಬರಿ ಸೊಪ್ಪನ್ನು ಹೀಗೆ ತಿಂದ್ರೆ ಯಾವ ರೋಗವೂ ನಿಮ್ಮತ್ತ ಸುಳಿಯಲ್ಲ!
ಇದನ್ನೂ ಓದಿ
ಕೇವಲ 50- 100 ರೂ.ಗಳಲ್ಲಿ ಈ ಹೇರ್ ಬ್ರೈಡ್ ಇಲ್ಲಿ ಲಭ್ಯವಿದ್ದು, ಪಾಟ್ನೆಮ್, ಬಾಗ, ಕಂಡೋಲಿಮ್ ಬೀಚ್ ಗಳಲ್ಲಿ ಸಾಕಷ್ಟು ಮಹಿಳೆಯರು ಇದನ್ನೇ ಉದ್ಯೋಗವನ್ನಾಗಿಯೂ ಆರಿಸಿಕೊಂಡಿದ್ದಾರೆ
ನಿಮ್ಗೂ ಕೂಡ ಈ ಹೇರ್ ಬ್ರೈಡ್ ಹಾಕೋಬೇಕಂತನ್ಸಿದ್ರೆ ಗೋವಾಕ್ಕೊಮ್ಮೆ ಹೋಗಿಬನ್ನಿ!!
ತುಳುವರಲ್ಲಿಯೇ ಅದೆಷ್ಟೋ ಜನರು ಈ ದೈವದ ಹೆಸರು ಕೇಳಿದ್ದೇ ಇಲ್ಲ!
ಇದನ್ನೂ ಓದಿ