Chestnut: ರುಚಿಯಾದ ಈ ಸಿಹಿ ಹಣ್ಣು ನಿಮ್ಮ ತೂಕ ಇಳಿಸುತ್ತೆ!

ಆರೋಗ್ಯ ಹೆಚ್ಚಿಸುವ ಹಣ್ಣು-ತರಕಾರಿಗಳ ಪೈಕಿ ಚೆಸ್ಟ್ನಟ್‌ ಕೂಡ ಒಂದು ಮುಖ್ಯವಾದ ಹಣ್ಣು 

ರುಚಿಕರ ಮತ್ತು ಸ್ವಲ್ಪ ಸಿಹಿಯಾದ ಚೆಸ್ಟ್ನಟ್ ಬೀಜಗಳು ದೇಹಕ್ಕೆ ಬೇಕಾದ ಪೋಷಣೆ ನೀಡುತ್ತವೆ

ಇವುಗಳನ್ನು ಸ್ಟಫಿಂಗ್‌, ಸಲಾಡ್‌, ಸೂಪ್‌ಗಳು ಮತ್ತು ವಿವಿಧ ಖಾದ್ಯಗಳ ರೂಪದಲ್ಲಿ ಸೇವಿಸಲಾಗುತ್ತದೆ

ಇದರಲ್ಲಿ ಕೊಬ್ಬಿನಂಶ ಕಡಿಮೆಯಿರೋದ್ರಿಂದ ಇದನ್ನು ಹೆಚ್ಚಾಗಿ ತೂಕ ನಷ್ಟ, ತೂಕ ನಿಯಂತ್ರಣ ಮತ್ತು ಡಯಟ್ ನಲ್ಲಿ ಸೇರಿಸಲಾಗುತ್ತದೆ

ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ 

ಇದು ಕ್ಯಾನ್ಸರ್ ಕೋಶಗಳ ರಚನೆ ತಡೆಯುತ್ತದೆ

ಇದು ಊತ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ

ಫೈಬರ್, ಖನಿಜ ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧವಾದ ಈ ಹಣ್ಣು ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ 

ಚೆಸ್ಟ್ನಟ್ ಅನ್ನು ಹಾಗೆಯೇ ತಿನ್ನಬಹುದು ಅಥವಾ ಕುದಿಸಿ, ಹುರಿದು ತಿನ್ನಬಹುದು