ಸ್ವಲ್ಪ ಕಾಸ್ಟ್ಲಿ ಆದ್ರೂ ಬ್ರೊಕೋಲಿ ತಿನ್ನಿ ಈ ಎಲ್ಲಾ ರೋಗಗಳಿಗೆ ಗುಡ್ ಬೈ ಹೇಳಿ!

ಬ್ರೊಕೊಲಿ ಒಂದು ಟೇಸ್ಟಿ ತರಕಾರಿ ಇದು ಹಲವಾರು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಬೇಸಿಗೆಯಲ್ಲಿ ಶಾಖದ ತೀವ್ರ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವತ್ತ ಹೆಚ್ಚು ಆದ್ಯತೆ ನೀಡಬೇಕು.

ದೇಹ ಮತ್ತು ಚರ್ಮವನ್ನೂ ಆರೋಗ್ಯಕರವಾಗಿರಿಸಿಕೊಳ್ಳಲು ನೀವು ಆಹಾರದಲ್ಲಿ ಬ್ರೊಕೋಲಿಯನ್ನು ಸೇವಿಸಬಹುದು.

ಸಾಮಾನ್ಯವಾಗಿ ತರಕಾರಿಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ.

ಬಿಸಿಲಿನಲ್ಲಿ ನಮ್ಮ ದೇಹವನ್ನು ತಾಜಾ ಮತ್ತು ತಂಪಾಗಿರಿಸಲು ಬ್ರೊಕೋಲಿ ಸಹಾಯ ಮಾಡುತ್ತದೆ.

ಈ ತರಕಾರಿಯು 92% ನೀರಿನಾಂಶ ಹೊಂದಿದ್ದು, ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬ್ರೊಕೋಲಿ ನಮ್ಮ  ತ್ವಚೆಯನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಬ್ರೊಕೊಲಿಯಲ್ಲಿ ಫೈಬರ್ ಮತ್ತು ನೀರಿನ ಅಂಶ ಹೆಚ್ಚಾಗಿರುತ್ತದೆ.

ಈ ಆಹಾರವು ಜೀರ್ಣಾಂಗ ವ್ಯವಸ್ಥೆಯಲ್ಲಿ ಸುಲಭವಾಗಿ ಹೋಗುತ್ತದೆ ಮತ್ತು ಜೀರ್ಣವಾಗುತ್ತದೆ.

ಇದು ಸಲ್ಫೊರಾಫೇನ್ನಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.