ರಾಜ್ಯಾದ್ಯಂತ ಡೆಂಗ್ಯೂ ಜ್ವರ ಹೆಚ್ಚಾಗಿದ್ದು ಸೋಂಕಿನಿಂದ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಅನ್ನೋದನ್ನ ವೈದ್ಯರು ತಿಳಿಸಿದ್ದಾರೆ ನೋಡಿ
ನಾವೆಲ್ಲ ರಾತ್ರಿ ವೇಳೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಬತ್ತಿಗಳನ್ನು ಬಳಸುತ್ತೇವೆ
ಆದರೆ ರಾತ್ರಿ ವೇಳೆ ಕಚ್ಚಲ್ಪಡುವ ಸೊಳ್ಳೆಗಳು ಯಾವುದೇ ಡೆಂಗ್ಯೂ ಕಾಯಿಲೆಗೆ ಕಾರಣವಾಗುವುದಿಲ್ಲ
ಬದಲಿಗೆ, ಮುಂಜಾನೆಯ ಸಮಯದಿಂದ ಮುಸ್ಸಂಜೆಯ ವೇಳೆಗೆ ಹೊರಬರುವ ಕಂದು ಬಣ್ಣದ ಹೆಣ್ಣು ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರಕ್ಕೆ ಬರುತ್ತವೆ
ಪೋಷಕರು ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಹರಡುತ್ತಿರುವ ಡೆಂಗ್ಯೂ ವೈರಸ್ನಿಂದ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಎಚ್ಚರವಹಿಸಬೇಕು
ಡೆಂಗ್ಯೂ ಸೊಳ್ಳೆಗಳಿಗೆ ಶುದ್ಧ ನೀರು ಪ್ರಿಯವಾಗಿರುವುದರಿಂದ ತಾವು ವಾಸಿಸುವ ಹಾಗೂ ಮಕ್ಕಳು ಆಟವಾಡುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನಿಗಾವಹಿಸಬೇಕು
ಮಕ್ಕಳನ್ನು ಶಾಲೆಗೆ ಕಳಿಸುವ ಸಂದರ್ಭದಲ್ಲಿ ಸೊಳ್ಳೆಗಳಿಂದ ರಕ್ಷಿಸುವಂತಹ ಉಡುಪನ್ನು ಹಾಗೂ ಕಾಲು ಚೀಲ (ಸಾಕ್ಸ್ ಸಹಿತ ಶೂ) ಧರಿಸಿ ಕಳಿಸಬೇಕು
ಇತ್ತೀಚಿಗೆ ಮಕ್ಕಳಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚು ಕಂಡು ಬರುತ್ತಿರುವುದರಿಂದ ಮಕ್ಕಳ ಆರೋಗ್ಯದ ಕಡೆ ನಿರ್ಲಕ್ಷ ತೋರದೆ ಹೆಚ್ಚು ಗಮನವಿಡುವುದು ಸೂಕ್ತ
ಮಕ್ಕಳು ತೆರಳುವ ಶಾಲೆಯ ವಾತಾವರಣ ಮತ್ತು ಪರಿಸರವನ್ನು ಗಮನಿಸಬೇಕು. ಹಾಗೆಯೇ ಮಕ್ಕಳಿಗೆ ನಿತ್ಯ ಪೌಷ್ಟಿಕಾಂಶ ಆಹಾರವನ್ನು ನೀಡುವುದು ಉತ್ತಮ
ಜೊತೆಗೆ ತಲೆನೋವು, ಜ್ವರ ಹಾಗೂ ಮೈಕೈ ನೋವಿನಂತಹ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನ ಸಂಪರ್ಕಿಸಿ ತಪಾಸಣೆ ನಡೆಸಬೇಕು
Mirror Vastu: ಮನೆಯಲ್ಲಿ ಕನ್ನಡಿ ಈ ದಿಕ್ಕಿನಲ್ಲಿಟ್ಟರೆ ಅದೃಷ್ಟ ಅನ್ನೋದು ನಿಮ್ಮ ಬೆನ್ನ ಹಿಂದೆಯೇ ಇರುತ್ತಂತೆ!