ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಕುರುಹುಗಳು ಈಗಲೂ ಇದೆ. ಅದಕ್ಕೆ ಉದಾಹರಣೆ ಎಂದರೆ ರಾಮ ಸೇತು

ಲಂಕೆಗೆ ಹೋಗಲು ರಾಮ ಹಾಗೂ ವಾನರ ಸೇನೆ ನಿರ್ಮಿಸಿದ ಈ ಸೇತುವಿಯ ಬಗ್ಗೆ ಅನೇಕ ಕುತೂಹಲಕಾರಿ ಮಾಹಿತಿಗಳು ಬಹಳಷ್ಟು ಜನರಿಗೆ ಗೊತ್ತಿಲ್ಲ

ಈ ರಾಮ ಸೇತು ಬಗ್ಗೆ ಕೆಲ ವಿಶೇಷ ವಿಚಾರಗಳು ಇಲ್ಲಿದೆ

ಸೀತೆಯನ್ನ ಕರೆತರಲು ವಾನರ ಸೈನ್ಯ ಹಾಗೂ ರಾಮ-ಲಕ್ಷ್ಮಣ ಲಂಕೆಗೆ ಹೊರಡುತ್ತಾರೆ

ರಾಮೇಶ್ವರಂ ಬಳಿ ಸಮುದ್ರದ ಹತ್ತಿರಕ್ಕೆ ಬಂದಾಗ, ಹೇಗೆ ಸಮುದ್ರವನ್ನ ದಾಟುವುದು ಎಂಬ ಸಮಸ್ಯೆ ಎದುರಾಗುತ್ತದೆ. ಆಗ ವಾನರ ಸೈನ್ಯ ಸೇತುವೆಯನ್ನ ನಿರ್ಮಾಣ ಮಾಡಲು ನಿರ್ಧರಿಸುತ್ತಾರೆ

ರಾಮನ ವಾನರ ಸೈನ್ಯವು ಲಂಕೆಗೆ ಹೋಗಲು ರಾಮೇಶ್ವರ ಸಮುದ್ರಕ್ಕೆ ಸೇತುವೆ ಕಟ್ಟುವಾಗ ನಲ ಮತ್ತು ನೀಲ ಎಂಬ ಎರಡು ಬುದ್ದಿವಂತ ಕೋತಿಗಳು ಈ ಸೇತುವೆಯನ್ನ ಕಟ್ಟಲು ಆರಂಭಿಸುತ್ತವೆ

ನಂಬಿಕೆಗಳ ಪ್ರಕಾರ ಈ ವಾನರರು ವಿಶ್ವಕರ್ಮನ ಮಕ್ಕಳು. ಹಾಗಾಗಿ ಇಬ್ಬರಿಗೂ ವಿಶೇಷ ಕಲೆ ಇರುತ್ತದೆ

ಮೊದಲು ಸೇತುವೆ ನಿರ್ಮಿಸಲು ಹಾಕಿದ ಕಲ್ಲುಗಳು ಮುಳುಗಲು ಆರಂಭವಾಗುತ್ತದೆ

ನಂತರ ವಾನರರು ಆ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ಸಮುದ್ರಕ್ಕೆ ಹಾಕಲು ಆರಂಭಿಸುತ್ತವೆ. ಇದರಿಂದ ಕಲ್ಲುಗಳು ಮುಳುಗುತ್ತಿರಲಿಲ್ಲ

ಆದರೆ ಇನ್ನೂ ಒಂದು ನಂಬಿಕೆಗಳ ಪ್ರಕಾರ ಈ ನಲ ಹಾಗೂ ನೀಳ ಇಬ್ಬರು ವಾನರರು ಬಹಳ ತುಂಟಾರಾಗಿದ್ದರಂತೆ

ಇಬ್ಬರ ಕಾಟವನ್ನ ತಡೆಯಲಾರದೆ ಒಮ್ಮೆ ಋಷಿಗಳು ನೀರಿನಲ್ಲಿ ನೀವು ಇನ್ನು ಯಾವುದೇ ವಸ್ತು ಹಾಕಿದರೂ ಅದು ಮುಳುಗದೇ ಇರಲಿ ಎಂದು ಶಾಪ ನೀಡುತ್ತಾರೆ

ಹಾಗಾಗಿ ಇಬ್ಬರು ಹಾಕಿದ ಕಲ್ಲುಗಳು ಮುಳುಗುವುದಿಲ್ಲ ಎನ್ನಲಾಗುತ್ತದೆ

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಸೇತುವೆ ನಿರ್ಮಾಣ ಮಾಡಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ

ಆದರೆ ಯಾವುದೇ ತಂತ್ರಜ್ಞಾನವಿಲ್ಲದೇ ಆಗಿನ ಕಾಲದಲ್ಲಿ ಕೇವಲ 5 ದಿನದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತಂತೆ. ಇದು ನಿಜಕ್ಕೂ ಪವಾಡ ಎನ್ನಬಹುದು

ಈ ರಾಮ ಸೇತುವೆಯು ಸುಮಾರು 13 ರಿಂದ 14 ಕಿಲೋಮೀಟರ್‌ ಉದ್ಧವಿದೆ ಎನ್ನಲಾಗುತ್ತದೆ. ವಾನರ ಸೈನ್ಯ ಸಾಮಾನ್ಯವಾಗಿ ತುಂಟಾಟಗಳಿಗೆ ಬಹಳ ಪ್ರಸಿದ್ಧ

ಆದರೆ ಕೇವಲ 5 ದಿನದಲ್ಲಿ ಇಷ್ಟು ಉದ್ದದ ಸೇತುವೆ ನಿರ್ಮಾಣ ಮಾಡಿದ್ದು, ನಿಜಕ್ಕೂ ಅದ್ಭುತವೇ ಸರಿ

ಇಂದಿಗೂ ಸುರಕ್ಷಿತವಾಗಿದ್ಯಾ ರಾವಣನ ಶವ? ಶ್ರೀಲಂಕಾದ ಅರಣ್ಯದಲ್ಲಿರುವ ಗುಹೆಯಲ್ಲಿ ಸಿಕ್ಕ ಪುರಾವೆಗಳು