1) ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ಹೇಗೆ ನಡೆಯುತ್ತೆ? ಮಂತ್ರಘೋಷಗಳ ಮೂಲಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ವಿಧಿವಿಧಾನ ಜನವರಿ 22ರಂದು ನಡೆಯಲಿದೆ
2) ಈಗಾಗಲೇ ವಿಗ್ರಹವಿದ್ದರೂ, ಮತ್ತೊಂದು ವಿಗ್ರಹ ಯಾಕೆ? ಅಯೋಧ್ಯೆಯಲ್ಲಿ ಈಗಾಗಲೇ ರಾಮನ ಶಿಶು ವಿಗ್ರಹವಿದೆ
ಬರುವ ಭಕ್ತರು 25ರಿಂದ 30 ಅಡಿ ದೂರದಿಂದಲೇ ದರ್ಶನ ಪಡೆಯಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಪ್ರತಿಮೆಯ ಅಗತ್ಯವಿತ್ತು
ಇನ್ನು ಹೊಸ ವಿಗ್ರಹವು ಅಚಲವಾಗಿರುತ್ತದೆ ಮತ್ತು ಯಾವಾಗಲೂ ಗರ್ಭಗುಡಿಯಲ್ಲಿ ಉಳಿಯುತ್ತದೆ. ಮೆರವಣಿಗೆಯಲ್ಲಿ ಹೊರತರಬಹುದಾದ ಮತ್ತೊಂದು ಉತ್ಸವ ಮೂರ್ತಿ ಇರುತ್ತದೆ
'ಮೋದಿ ಭಗವಾನ್ ವಿಷ್ಣುವಿನ ಅವತಾರ', ಪ್ರಧಾನಿಗೆ ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯ ಭರಪೂರ ಹೊಗಳಿಕೆ!
3) ಈ ಮೂರು ವಿಗ್ರಹಗಳನ್ನು ಯಾವುದರಿಂದ ತಯಾರಿಸಲಾಗಿದೆ? ತಯಾರಾಗುತ್ತಿರುವ ಮೂರು ವಿಗ್ರಹಗಳು ವಿಭಿನ್ನ ಕಲ್ಲುಗಳು ಅಥವಾ ಲೋಹಗಳಿಂದ ಮಾಡಲ್ಪಟ್ಟಿದೆ
ಈ ಮೂರ್ತಿಗಳ ನಿರ್ಮಾಣ ರಹಸ್ಯವಾಗಿ ನಡೆಯುತ್ತಿದೆ. ಈ ದೇವಾಲಯವು ಸಾವಿರಾರು ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ಇಡೀ ದೇವಾಲಯವನ್ನು ವಿಶೇಷ ಕಲ್ಲುಗಳಿಂದ ನಿರ್ಮಿಸಲಾಗಿದ
4) ದೇವಸ್ಥಾನ ಎಷ್ಟು ದೊಡ್ಡದು? ರಾಮಮಂದಿರದ ಒಟ್ಟು ವಿಸ್ತೀರ್ಣ 2.7 ಎಕರೆ ಮತ್ತು ದೇವಾಲಯವನ್ನು 57000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಮೂರು ಮಹಡಿಗಳನ್ನು ಹೊಂದಿದೆ. ಪ್ರತಿ ಅಂತಸ್ತಿನ ಎತ್ತರ 20 ಅಡಿ
5)ಎಷ್ಟು ಜನರು ಕೆಲ ಮಾಡುತ್ತಿದ್ದಾರೆ? ಈ ಕೆಲಸದಲ್ಲಿ 3500 ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. ಸದ್ಯ ನೆಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಶ್ರೀರಾಮನ ಸಂಪೂರ್ಣ ಕಥೆಯನ್ನು ನೆಲ ಮಹಡಿಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ
ರಾಮಮಂದಿರ ಉದ್ಘಾಟನೆಗೆ ಬರೋ ಭಕ್ತರಿಗಾಗಿ ರೆಡಿಯಾಯ್ತು ಟೆಂಟ್ ಸಿಟಿ, ಒಂದು ದಿನದ ಬಾಡಿಗೆ ದರ ಇಷ್ಟು!
6) ಎಷ್ಟು ವರ್ಷದವರೆಗೂ ಗಟ್ಟಿಯಾಗುರತ್ತೆ ಈ ದೇಗುಲ? ಭೂಕಂಪಕ್ಕಿಂತ 50 ಪಟ್ಟು ಹೆಚ್ಚು ಪ್ರಬಲವಾದ ಭೂಕಂಪ ಸಂಭವಿಸಿದರೂ ಯಾವುದೇ ಅಪಾಯವಿಲ್ಲ. 1000 ವರ್ಷ ಆದರೂ ಈ ದೇವಸ್ಥಾ ಗಟ್ಟಿಯಾಗಿರುತ್ತೆ
7) ರಾಮ ಹೊರುತುಪಡಿಸಿ, ಇನ್ಯಾವ ದೇವರ ವಿಗ್ರಹಗಳಿರುತ್ತೆ? ಇದರಲ್ಲಿ ಮಹರ್ಷಿ ವಾಲ್ಮೀಕಿ, ವಶಿಷ್ಠ, ನಿಷಾದ್ ಮಹಾರಾಜ್, ಶಬರಿಮಾತೆ, ಅಹಲ್ಯಾ ಮುಂತಾದ ಏಳು ದೇವಾಲಯಗಳು ಸೇರಲಿವೆ
8. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪಾತ್ರವೇನು? ಜನಸಂದಣಿ ನಿಯಂತ್ರಣ, ಭಕ್ತರಿಗೆ ಸೌಲಭ್ಯಗಳು, ಹಣ ನಿರ್ವಹಣೆ, ಈ ಎಲ್ಲ ಕೆಲಸಗಳನ್ನು ಟ್ರಸ್ಟ್‌ನಿಂದಲೇ ಮಾಡಬೇಕಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ
9.ಭದ್ರತೆಯ ವಿಷಯದಲ್ಲಿ ಯಾವ ವ್ಯವಸ್ಥೆ ಇರುತ್ತದೆ? ಟ್ರಸ್ಟ್ ಸ್ವತಃ ಈ ಭದ್ರತೆಗೆ ವ್ಯವಸ್ಥೆ ಮಾಡುತ್ತದೆ. ಆದರೆ ಸಂಪೂರ್ಣ ಭದ್ರತೆಯನ್ನು ಉತ್ತರ ಪ್ರದೇಶ ಸರ್ಕಾರ ನೋಡಿಕೊಳ್ಳುತ್ತದೆ. ವಿಐಪಿಗಳ ರಕ್ಷಣೆಗೆ ಎಸ್ ಪಿಜಿ ಕಮಾಂಡೋಗಳಿದ್ದಾರಂತೆ
10. ಜನವರಿ 22 ರಂದು ಸಾರ್ವಜನಿಕರಿಗೂ ದರ್ಶನ ಇದ್ಯಾ? ಇಲ್ಲ, ಜನವರಿ 22 ರಂದು, ರಾಮ ಮಂದಿರದ ಪ್ರತಿಷ್ಠಾಪನೆಯ ದಿನ. ಅಯೋಧ್ಯೆಗೆ ಯಾವುದೇ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ
ಅಯೋಧ್ಯೆ ರಾಮ ಮಂದಿರದ ವಿಡಿಯೋ ಚಿತ್ರೀಕರಣ! ಪೊಲೀಸರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ವ್ಯಕ್ತಿ