ಅದರ ಬಗ್ಗೆ ಎಚ್ಚರಿಕೆ ಇಂದಿರಿ. ಏಕೆಂದರೆ ಈ ಬೆನ್ನು ನೋವು ನಿಮ್ಮ ದೇಹದಲ್ಲಿ ಯಾವಾಗ ಗಂಭೀರ ಕಾಯಿಲೆಯನ್ನು ಉಂಟುಮಾಡುತ್ತದೆ ಎಂಬುದು ನಿಮಗೆ ತಿಳಿಯುವುದಿಲ್ಲ.ಇಂದಿನ ಲೈಫ್ಸ್ಟೈಲ್ನಿಂದಾಗಿ ಅನೇಕ ಮಂದಿ ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ
ಎಲ್ಲಕ್ಕಿಂತ ಹೆಚ್ಚಾಗಿ ಲ್ಯಾಪ್ಟಾಪ್ ಮುಂದೆ ಗಂಟೆಗಟ್ಟಲೆ ಕುಳಿತು ಕಚೇರಿಯಲ್ಲಿ ನಿರಂತರವಾಗಿ ಕೆಲಸ ಮಾಡುವವರು ಹೆಚ್ಚಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಕೆಳ ಬೆನ್ನು ನೋವು ಎಂದರೆ ನಿಮ್ಮ ಕೆಳ ಬೆನ್ನಿನಲ್ಲಿ ನೋವು. ನೀವು ದೀರ್ಘಕಾಲದವರೆಗೆ ಈ ನೋವಿನಿಂದ ಬಳಲುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ
ಅದರ ಬಗ್ಗೆ ಎಚ್ಚರಿಕೆ ಇಂದಿರಿ. ಏಕೆಂದರೆ ಈ ಬೆನ್ನು ನೋವು ನಿಮ್ಮ ದೇಹದಲ್ಲಿ ಯಾವಾಗ ಗಂಭೀರ ಕಾಯಿಲೆಯನ್ನು ಉಂಟುಮಾಡುತ್ತದೆ ಎಂಬುದು ನಿಮಗೆ ತಿಳಿಯುವುದಿಲ್ಲ
ಹೆಚ್ಚಾಗಿ ಗೃಹಿಣೆಯರು ಮನೆಕೆಲಸದಲ್ಲಿ ನಿರತರಾಗಿರುವುದರಿಂದ ಬೆನ್ನು ನೋವನ್ನು ನಿರ್ಲಕ್ಷಿಸುತ್ತಾರೆ. ಕುಳಿತುಕೊಳ್ಳುವಾಗ ಅಥವಾ ಮಲಗುವ ತಪ್ಪು ವಿಧಾನದಿಂದಾಗಿ ಈ ಸಮಸ್ಯೆ ಎದುರಾಗುತ್ತದೆ ಎಂದು ಸಾಕಷ್ಟು ಮಂದಿ ಭಾವಿಸುತ್ತಾರೆ
ಡಿಸ್ಕ್ ಸಮಸ್ಯೆ: ನಮ್ಮ ಡಿಸ್ಕ್ ಬೆನ್ನುಮೂಳೆಯ ಮೂಳೆಗಳ ನಡುವೆ ದೇಹವನ್ನು ಸಮತೋಲನಗೊಳಿಸುತ್ತದೆ. ಇದರಲ್ಲಿ ಯಾವುದಾದರೂ ಅಡಚಣೆ ಉಂಟಾದಾಗ ನೀವು ಬೆನ್ನು ನೋವಿಗೆ ಒಳಗಾಗಬಹುದು. ನಮ್ಮ ದೇಹದ ಡಿಸ್ಕ್ನೊಳಗಿನ ಕಾರ್ಟಿಲೆಜ್ ಮೇಲೆ ಬರಲು ಪ್ರಾರಂಭಿಸಿದಾಗ, ಅಂತಹ ವೇಳೆ ಅದು ಒಡೆಯುವ ಭಯವಿರುತ್ತದೆ