ನಿಮ್ಮ ಬಾತ್ರೂಮ್ , ಟಾಯ್ಲೆಟ್ನಿಂದ ಕೆಟ್ಟ ವಾಸನೆ ಬರುತ್ತಿದ್ರೆ ಇಂದು ನಾವು ಹೇಳುವ ಟಿಪ್ಸ್ ಫಾಲೋ ಮಾಡಬಹುದು. ಇದಕ್ಕೆ ಯಾವುದೇ ಖರ್ಚು ಆಗಲ್ಲ
ಸ್ನಾನಗೃಹ, ಶೌಚಾಲಯ ಮನೆಯ ಒಂದು ಭಾಗವಾಗಿದೆ. ಹಾಗಾಗಿ ಎರಡನ್ನೂ ಸ್ವಚ್ಛಗೊಳಿಸುತ್ತಿರಬೇಕು
ಇಲ್ಲವಾದ್ರೆ ಮನೆಗೆ ಯಾರಾದ್ರು ಗೆಸ್ಟ್ ಬಂದಾಗ ಅದರ ಕೆಟ್ಟ ವಾಸನೆಯಿಂದ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ
ಒಬ್ಬರು ಹೋಗಿ ಬಂದ ನಂತರ ಮರುಕ್ಷಣವೇ ಶೌಚಾಲಯಕ್ಕೆ ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ಅಲ್ಲಿಂದ ಬರೋ ಕೆಟ್ಟ ವಾಸನೆ
ಟಾಯ್ಲೆಟ್ ಒಬ್ಬರು ಬಳಸಿದ ನಂತರ ಮತ್ತೊಬ್ಬರು ಅಲ್ಲಿಯ ವಾಸನೆ ಹೋಗುವರೆಗೂ ಕಾಯೋದು ಉತ್ತಮ ಎಂದು ಜನರು ಹೇಳುತ್ತಿರುತ್ತಾರೆ
ನಿಮ್ಮ ಬಾತ್ ರೂಮ್, ಟಾಯ್ಲೆಟ್ನಿಂದ ದುರ್ವಾಸನೆ ಬರುತ್ತಿದ್ರೆ ಈ ಸಲಹೆಗಳನ್ನು ಪಾಲಿಸಿ
ಈ ಟಿಪ್ಸ್ ಫಾಲೋ ಮಾಡಿದ್ರೆ ಏರ್ ಫ್ರೆಶನರ್ಗಳಿಗಾಗಿ ಹಣ ಖರ್ಚು ಮಾಡುವ ಅಗತ್ಯ ಇರಲ್ಲ
ಬಾತ್ ರೂಮ್ ಅಥವಾ ಟಾಯ್ಲೆಟ್ ಕೋಣೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಸಬೇಕು. ಇದು ವಾಸನೆ ಕಡಿಮೆ ಮಾಡುವ ಕೆಲಸ ಮಾಡುತ್ತದೆ
ಹುಡುಗಿಯೊಬ್ಬಳು ನಿಮ್ಮನ್ನು ಪ್ರೀತಿಸುತ್ತಿದ್ದಾಳೆಂದರೆ ಆಕೆಯ ನಡವಳಿಕೆಗಳು ಹೀಗಿರುತ್ತವೆ!
ಇದನ್ನು ಟಾಯ್ಲೆಟ್ ಸೀಟಿನಲ್ಲಿ ಕುಳಿತುಕೊಳ್ಳುವ ಮೊದಲು ಆನ್ ಮಾಡಬೇಕು. ವಾಸನೆ ಹೋಗುವವರೆಗೆ ಆನ್ ನಲ್ಲಿರುವಂತೆ ನೋಡಿಕೊಳ್ಳಿ
ಬಾತ್ರೂಮ್ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಇಡಬೇಡಿ. ಶೌಚಾಲಯವನ್ನು ಬಳಸಿದ ನಂತರ ಸಂಪೂರ್ಣವಾಗಿ ಫ್ಲಶ್ ಮಾಡೋದನ್ನು ಮರೆಯಬೇಡಿ
ಟಾಯ್ಲೆಟ್ ಸೀಟ್ ಅನ್ನು ಸರಿಯಾಗಿ ಸ್ವಚ್ಚಗೊಳಿಸಬೇಕು. ಇಲ್ಲವಾದ್ರೆ ಅದು ದುರ್ವಾಸನೆಗೆ ಕಾರಣವಾಗುತ್ತದೆ. ಆದ್ದರಿಂದ ಟಾಯ್ಲೆಟ್ ನ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಬೇಕು
ಒಂದು ಕಪ್ಗೆ ಕಾಫಿ ಪುಡಿ ಹಾಕಿ ಅದಕ್ಕೆ ಬಿಸಿನೀರು ಹಾಕಿ. ರಾತ್ರಿ ಈ ಮಿಶ್ರಣವನ್ನು ಟಾಯ್ಲೆಟ್ ಮೇಲೆ ಒಳಗೆ ಹಾಕಿ ಬೆಳಗ್ಗೆ ತೊಳೆಯಿರಿ. ಇದರಿಂದ ಟಾಯ್ಲೆಟ್ ಸ್ವಚ್ಛವಾಗಿರುತ್ತದೆ
ನಿಮ್ಮ ಬಾತ್ರೂಮ್ , ಟಾಯ್ಲೆಟ್ನಿಂದ ಕೆಟ್ಟ ವಾಸನೆ ಬರುತ್ತಿದ್ರೆ ಇಂದು ನಾವು ಹೇಳುವ ಟಿಪ್ಸ್ ಫಾಲೋ ಮಾಡಬಹುದು. ಇದಕ್ಕೆ ಯಾವುದೇ ಖರ್ಚು ಆಗಲ್ಲ