ಮುಖ್ಯವಾಗಿ ಆಕರ್ಷಕ ನಾಲ್ಕು ಅಂತಸ್ತಿನ ಗೋಪುರವಿದ್ದು, ಭಗವಾನ್‌ ಬುದ್ಧ 

ಹಾಗೂ ಎರಡು ಬದಿಗಳಲ್ಲಿ ಭಗವಾನ್‌ ಅಮಿತಾಯ ಮತ್ತು ಭಗವಾನ್‌ ಪದ್ಮಸಂಭವರ ಪ್ರತಿಮೆಗಳು ಇವೆ

ಗೋಲ್ಡನ್‌ ಟೆಂಪಲ್‌ ಕೊಡಗು ಜಿಲ್ಲೆಯ ಕುಶಾಲನಗರಿಂದ 5 ಕಿಲೋ ಮೀಟರ್‌ ದೂರದಲ್ಲಿರುವ ಬೈಲುಕುಪ್ಪೆಯಲ್ಲಿದೆ

ಇಲ್ಲಿ 20 ಸಾವಿರಕ್ಕೂ ಅಧಿಕ ಬೌದ್ಧ ಭಿಕ್ಕುಗಳು ಹಾಗೂ ಮಕ್ಕಳು ವಾಸಿಸುತ್ತಾ ಇದ್ದಾರೆ

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಸುವರ್ಣ ದೇವಾಲಯವು ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ

ಇಲ್ಲಿಗೆ ಹೋಗುವುದಿದ್ದರೆ ಯಾವುದೇ ಶುಲ್ಕ ನೀಡಬೇಕಿಲ್ಲ. ಜೊತೆಗೆ ಯಾವುದೇ ಧರ್ಮೀಯರು ಈ ದೇವಾಲಯಕ್ಕೆ ಹೋಗಬಹುದಾಗಿದೆ

ಬೆಂಗಳೂರಿನಿಂದ 220 ಮತ್ತು ಮಂಗಳೂರಿನಿಂದ 172 ಹಾಗೂ ಮೈಸೂರಿನಿಂದ 101 ಕಿಲೋ ಮೀಟರ್‌ ದೂರದಲ್ಲಿ ಬೈಲುಕುಪ್ಪೆಯಿದೆ

ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಹಾಸನವಾಗಿದೆ. ಹಾಸನ ರೈಲು ನಿಲ್ದಾಣ 80 ಕಿಲೋ ಮೀಟರ್‌ ದೂರ ಹೊಂದಿದೆ

ಉಳಿದಂತೆ ರಾಜ್ಯ ಎಲ್ಲ ಪ್ರಮುಖ ನಗರಗಳಿಂದ ಕುಶಾಲನಗರಕ್ಕೆ ಬಸ್‌ ಸೌಕರ್ಯವಿದೆ

ಕುಶಾಲನಗರದಲ್ಲಿ ಹಲವು ರೆಸಾರ್ಟ್‌, ಹೋಂ ಸ್ಟೇಗಳು ಕೂಡಾ ಇದ್ದು, ಉತ್ತಮ ವಸತಿ ವ್ಯವಸ್ಥೆಯನ್ನ ಹೊಂದಿದೆ

Agriculture Subsidy: ಕೃಷಿಕರೇ ಗಮನಿಸಿ, ಸಹಾಯಧನಕ್ಕಾಗಿ ಈಗಲೇ ಹೀಗೆ ಅರ್ಜಿ ಸಲ್ಲಿಸಿ