ಜನವರಿ 22ರಂದು ರಾಮಮಂದಿರ ಉದ್ಘಾಟನೆ ನಡೆಯುತ್ತಿರೋ ಹಿನ್ನೆಲೆ ಅಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
ಜೊತೆಗೆ ಮದ್ಯದಂಗಡಿಗಳು ಕೂಡ ಮುಚ್ಚಿರಲಿವೆ. ಜೊತೆಗೆ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಲಾಗಿದೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಬಹುತೇಕ ಪೂರ್ಣಗೊಂಡಿದೆ
ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಇದೇ ಜನವರಿ 22ರಂದು ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ
ದೇಶಾದ್ಯಂತ ಹಲವಾರು ಗಣ್ಯರಿಗೆ ಅಯೋಧ್ಯಾ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ಮಾಡಲಾಗುತ್ತಿದೆ
ಇನ್ನೂ ಉತ್ತರ ಪ್ರದೇಶದಲ್ಲಿ ಶಾಲಾ-ಕಾಲೇಜುಗಳಿಗೆ ಜನವರಿ 22ರಂದು ರಜೆ ಘೋಷಿಸಲಾಗಿದೆ
ಮದ್ಯದಂಗಡಿಗಳು ಕೂಡ ಬಂದ್ ಆಗಿರಲಿವೆ. ಇದೀಗ ಗೋವಾ ಸರ್ಕಾರ ಕೂಡ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಿದೆ
ಜೊತೆಗೆ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಶಾಲೆಗಳ ಜೊತೆಗೆ ಸರ್ಕಾರಿ ನೌಕರರಿಗೆ ಮಾತ್ರ ಸಾರ್ವಜನಿಕ ರಜೆ ಇರುತ್ತದೆ ಎಂದು ಹೇಳಿದ್ದಾರೆ
ಭಯೋತ್ಪಾದಕರ ಟಾರ್ಗೆಟ್ನಲ್ಲಿ ರಾಮ ಮಂದಿರ, ರಾಜಕಾರಣಿಗಳ ಮೇಲೂ ಗುರಿ, ಗುಪ್ತಚರ ಸಂಸ್ಥೆಗಳ ಎಚ್ಚರಿಕೆ
2024ರ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ನ ಭೂತೋ ನ ಭವಿಷ್ಯತಿ ಎನ್ನುವಂತೆ ಸಮಾರಂಭ ನಡೆಸಲು ಸಕಲ ಸಿದ್ಧತೆ ನಡೆದಿದೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಂಕೀರ್ಣದ ಭದ್ರತೆಯ ಜವಾಬ್ದಾರಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ
ಸಿಎಂ ಯೋಗಿ ಅವರ ನಿರ್ದೇಶನದ ಮೇರೆಗೆ ಸಾರಿಗೆ ಇಲಾಖೆಯು ಅಯೋಧ್ಯೆಯಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ ಟ್ಯಾಕ್ಸಿ ಮತ್ತು ಟೂರಿಸ್ಟ್ ಬಸ್ ವಾಹನಗಳನ್ನು ಅಗತ್ಯವಿರುವಂತೆ ಕಾಯ್ದಿರಿಸುವ ಯೋಜನೆಯನ್ನು ಪ್ರಾರಂಭಿಸಿದೆ
ಗೋವಾ ದೇಗುಲದಲ್ಲಿ 10ನೇ ಶತಮಾನದ ಕನ್ನಡ ಶಾಸನ ಪತ್ತೆ, ದಾಖಲಾಗಿದೆ ಕುತೂಹಲಕರ ಮಾಹಿತಿ