ಚಳಿಗಾಲದಿಂದ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ? ಡೋಂಟ್ ವರಿ ಇಲ್ಲಿದೆ ಪರಿಹಾರ!

ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ, ಕಾಯಿಲ್, ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ.

ಸೊಳ್ಳೆ ದೇಹದ ಯಾವ ಭಾಗಕ್ಕೆ ಕಚ್ಚುತ್ತದೆಯೋ ಆ ಭಾಗ ಊದಿಕೊಳ್ಳುತ್ತದೆ.

ಆದರೆ ಅನೇಕ ಜನರಿಗೆ, ಸೊಳ್ಳೆ ಕಡಿತವು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಮನೆಗೆ ಸ್ಪ್ರೇ ಮಾಡಿ ಅದರ ಪರಿಮಳದಿಂದ ಸುಲಭವಾಗಿ ಸೊಳ್ಳೆಗಳನ್ನು ತೊಡೆದುಹಾಕಬಹುದು.

ಅಡುಗೆ ಮನೆಯಲ್ಲಿರುವ ಕೆಲವು ಬೇ ಎಲೆಗಳ ಜೊತೆಗೆ ಸ್ವಲ್ಪ ಕರ್ಪೂರವನ್ನು ತೆಗೆದುಕೊಳ್ಳಬೇಕು.

ಈ ಎಲೆಯ ಮೇಲೆ ತುಪ್ಪವನ್ನು ಹರಡಿ ಮತ್ತು ಕರ್ಪೂರಗಳನ್ನು ಚೆನ್ನಾಗಿ ಪುಡಿ ಮಾಡಿ.

ಈಗ ಮಣ್ಣಿನ ಪಾತ್ರೆಯೊಳಗೆ ತುಪ್ಪ ಲೇಪಿತ ಬೇ ಎಲೆಗಳನ್ನು ಹಾಕಿ ಬೆಂಕಿ ಹಚ್ಚಿ.

ನಂತರ ಆ ಕರ್ಪೂರದ ಉಂಡೆಗಳನ್ನು ಅದರ ಮೇಲೆ ಇಟ್ಟಾಗ ಪರಿಮಳದ ವಾಸನೆ ಬರುತ್ತದೆ.

ಈ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಇದರಿಂದಾಗಿ ಅವು ಕ್ಷಣ ಮಾತ್ರದಲ್ಲಿಯೇ ಮನೆ ಬಿಟ್ಟು ಹೋಗುತ್ತವೆ.

ಮನೆಯಲ್ಲಿ ಹಲ್ಲಿ ಕಾಟ ಜಾಸ್ತಿ ಇದ್ಯಾ? ಹೀಗೆ ಮಾಡಿ, ಒಂದೇ ಒಂದು ಇರಲ್ಲ!