ದೇಶದಲ್ಲೇ ಮೊದಲು! ದಾಖಲೆ ನಿರ್ಮಿಸಿದ ಬೆಂಗಳೂರು
ಈಗ ಕಟ್ಟಡ ಕಟ್ಟುವುದು ಅಂದ್ರೆ ಸಿಮೆಂಟು, ಇಟ್ಟಿಗೆ, ಗಾರೆ, ಕಬ್ಬಿಣ ಇವೆಲ್ಲ ಬೇಕು ಅಂತೇನಿಲ್ಲ.
ಬೆಂಗಳೂರಿನ ಅಲಸೂರಿನ ಕೆಂಬ್ರಿಡ್ಜ್ ಲೇಔಟ್‌ನಲ್ಲಿ ಹೊಸದೊಂದು ಅಂಚೆ ಕಚೇರಿ ನಿರ್ಮಾಣವಾಗಿದೆ.
ಕೆಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಿಸಲಾಗಿರುವ ಈ ಅಂಚೆ ಕಚೇರಿ 3ಡಿ ಮುದ್ರಿತ ಅಂಚೆ ಕಚೇರಿಯಾಗಿದೆ.
ಅಷ್ಟೇ ಅಲ್ಲ ಇದು ದೇಶದ ಮೊದಲ ತ್ರಿಡಿ ಮುದ್ರಿತ ಅಂಚೆ ಕಚೇರಿ ಎಂಬ ಗೌರವಕ್ಕೂ ಪಾತ್ರವಾಗಿದೆ.
ಈ ತ್ರಿಡಿ ಮುದ್ರಿತ ಅಂಚೆ ಕಚೇರಿ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ಮಾತನ್ನಾಡಿದ್ದಾರೆ.
1,100 ಚದರಡಿ ಅಂಗಳದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ ವೆಚ್ಚವಾಗಿದೆ.
ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ ವೆಚ್ಚವಾಗಿದೆ.
ಈ ಹಿಂದೆಯೇ ಭಾರತದಲ್ಲಿ 3ಡಿ ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳ ನಿರ್ಮಾಣ ಆಗಿದ್ದವು.
ಒಟ್ಟಾರೆ 3ಡಿ ಅಂಚೆ ಕಚೇರಿಯ ಕಾರಣದಿಂದ ಬೆಂಗಳೂರು ಮತ್ತೆ ಪಾಸಿಟಿವ್ ವಿಷಯಕ್ಕೆ ಸುದ್ದಿ ಮಾಡಿದೆ.