ಇನ್ನು ಈ ದೇವಸ್ಥಾನದ ಇತಿಹಾಸವನ್ನು ನೋಡುವುದಾದರೆ ಈ ದೇವಾಲಯವು ಬೇಲೂರು, ಹಳೇಬೀಡು ದೇವಾಲಯಗಳ ಸಮಕಾಲಿನಲ್ಲಿಯೇ ನಿರ್ಮಾಣವಾದ ದೇವಾಲಯವಾಗಿದೆ
ಇಲ್ಲಿ ಹೊಯ್ಸಳ ಶೈಲಿಯ ಮನಮೋಹಕವಾದ ಶಿಲ್ಪಕಲೆಯನ್ನು ನಾವು ಕಾಣಬಹುದಾಗಿರುವಂಥದ್ದು 12ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ಸುಮಾರು 740 ವರ್ಷಗಳಷ್ಟು ಹಳೆಯದಾದ ದೇವಾಲಯವು ಕೂಡ ಹೌದು
ವಿಶ್ವ ಪಾರಂಪರಿಕ ಪಟ್ಟಿ ಅಂತಂದ್ರೆ ಯುನೆಸ್ಕೊ ವಿಶಿಷ್ಟ ಅರಣ್ಯ, ಪರ್ವತ ,ಸರೋವರ, ಸ್ಮಾರಕ ,ಕಟ್ಟಡ ,ಮರುಭೂಮಿ ಹೀಗೆ ಪ್ರಮುಖ ಪ್ರವಾಸಿ ತಾಣಗಳನ್ನು ಅವುಗಳ ಅರ್ಹತಾ ಮಾನದಂಡದ ಮೇಲೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುತ್ತದೆ