ಕೆಲವರಿಗಂತೂ ನಿದ್ರೆ ಮತ್ತು ಆಯಾಸವನ್ನು ನಿವಾರಿಸಲು ಟೀಗಿಂತ ಉತ್ತಮವಾದ ಮದ್ದು ಯಾವುದೂ ಇಲ್ಲ

ಆದರೆ ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಚಹಾವು ಬೊಜ್ಜನ್ನು ಹೆಚ್ಚಿಸಬಹುದು

ಇದು ಜೀರ್ಣಕ್ರಿಯೆಗೆ ಉತ್ತಮವಲ್ಲ ಎಂದು ಎಲ್ಲರಿಗೂ ತಿಳಿದಿದೆ

ಆದರೆ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಿದರೆ ಚಹಾ ಕುಡಿದರೂ ತೂಕ ಹೆಚ್ಚಾಗುವುದಿಲ್ಲ

ಅವು ಯಾವುವು ಅಂತೀರಾ ಹಾಗಾದ್ರೆ ನೋಡೋಣ ಬನ್ನಿ

ಸಾಮಾನ್ಯವಾಗಿ ಚಹಾ ಕುಡಿಯುವವರ ತೂಕ ಹೆಚ್ಚಾಗುತ್ತದೆ. ಏಕೆಂದರೆ ಅದರಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ

ನೀವು ಚಹಾದ ಮೂಲಕ ಹೆಚ್ಚಾಗಿ ಸಕ್ಕರೆಯನ್ನು ಸೇವಿಸಿದರೆ, ಇದರಿಂದಾಗಿ ಅದು ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಮತ್ತು ಬೊಜ್ಜು ಹೆಚ್ಚಾಗುತ್ತದೆ

ಆದ್ದರಿಂದ ನೀವು ಸಕ್ಕರೆ ಇಲ್ಲದೆ ಇರುವ ಚಹಾವನ್ನು ಕುಡಿಯಬೇಕು. ಇದರಿಂದಾಗಿ ಫಿಟ್ನೆಸ್ನಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ

ಸಾಮಾನ್ಯವಾಗಿ ಒಂದು ಕಪ್ ಚಹಾವು ಸುಮಾರು 125 ಕ್ಯಾಲೋರಿಗಳನ್ನು ಹೊಂದಿರುತ್ತದೆ

 ಹಾಗಾಗಿ ನಾವು  ಗ್ರೀನ್ ಟೀ ಕುಡಿಯುವುದು ಉತ್ತಮ