ವರಮಹಾಲಕ್ಷ್ಮಿ ದಿನದಂದು ಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಗಿ ಆಚರಿಸುತ್ತಾರೆ
ಆದರೆ ಲಕ್ಷ್ಮಿಯ ಅನುಗ್ರಹ ಪ್ರತಿದಿನ ನಮ್ಮ ಮೇಲೆ ಇರಬೇಕು ಅಂದ್ರೆ ನಾವು ಇದನ್ನು ಮಾಡಬೇಕು
ಪ್ರತಿದಿನ ಎದ್ದ ತಕ್ಷಣ ಮನೆ ದೇವರನ್ನು ಮನದಲ್ಲಿ ನೆನೆದುಕೊಳ್ಳಿ
ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಯಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮುಂಜಾನೆ ಎದ್ದು ಶುಚಿಯಾದ ಬಳಿಕ ನೀವು ಕುಲದೇವರನ್ನು ಭಕ್ತಿ ಪೂರ್ವಕವಾಗಿ ಪೂಜೆ ಮಾಡಬೇಕು
ಪ್ರತಿದಿನ ಸ್ನಾನದ ನಂತರ ತಿಂಡಿ ಮಾಡಬೇಕು. ಯಾಕಂದ್ರೆ ಹಿಂದೂ ಧರ್ಮದಲ್ಲಿ ಅಡುಗೆ ಮನೆಯನ್ನು ಪವಿತ್ರ ಸ್ಥಾನವೆಂದು ಪರಿಗಣಿಸಲಾಗುತ್ತೆ. ಮಾಡಿದ ಸಾತ್ವಿಕ ಆಹಾರವನ್ನು ಲಕ್ಷ್ಮಿ ದೇವರಿಗೆ ಅರ್ಪಿಸಿ. ಇದರೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮನೆಯಲ್ಲಿರುತ್ತದೆ
ಭಾನುವಾರ ಹೊರತುಪಡಿಸಿ ತುಳಸಿಗೆ ನೀರನ್ನು ಅರ್ಪಿಸಬೇಕು ಮತ್ತು ಧಾರ್ಮಿಕ ಗ್ರಂಥಗಳನ್ನು ಪಠಿಸಬೇಕು. ಇದು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ
ನೀವು ಮನೆಯಲ್ಲಿ ಮಾಡಿದ ಆಹಾರವನ್ನು ಹಸುವಿಗೆ ಮತ್ತು ನಾಯಿಗೆ ತಿನ್ನಿಸಿ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದರಿಂದ ಮನೆಯಲ್ಲಿ ಲಕ್ಷ್ಮಿ ಜೊತೆಗೆ ಶನಿದೇವನ ಕೃಪೆಯೂ ಇರುತ್ತದೆ
ಈ ಕಾರ್ಯವನ್ನು ನೀವು ಪ್ರತಿನಿತ್ಯ ಮಾಡಿದ್ರೆ ಖಂಡಿತವಾಗಿಯೂ ಲಕ್ಷ್ಮಿಯ ಕೃಪೆ ನಿಮ್ಮದಾಗುತ್ತಂತೆ
ವರಮಹಾಲಕ್ಷ್ಮಿ ಪೂಜೆಗೆ ಮಾಡಿ ಚಾಕ್ಲೆಟ್-ಮ್ಯಾಂಗೋ ಒಬ್ಬಟ್ಟು!