ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!
ಹೆಂಡತಿ ಗರ್ಭಿಣಿಯಾದಾಗ ಎಷ್ಟು ಜಾಗರೂಕತೆಯಿಂದ ಗಂಡ ನೋಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು.
ಹೆಂಡತಿಯ ಆರೋಗ್ಯದಲ್ಲಿ ಹುಟ್ಟಲಿರುವ ಮಗುವಿನ ಜೀವನ ಅಡಗಿರುತ್ತದೆ.
ಆದ್ದರಿಂದ ಯಾವಾಗಲೂ ಆರೋಗ್ಯವಾಗಿ ಮತ್ತು ಸಂತೋಷವಾಗಿ ಆಕೆಯನ್ನು ನೋಡಿಕೊಳ್ಳಿ.
ಹೆಂಡತಿ ಗರ್ಭಿಣಿಯಾಗಿದ್ದಾಗ ಗಂಡಂದಿರು ಗರ್ಭಧಾರಣೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಂತರ್ಜಾಲ ಅಥವಾ ಪುಸ್ತಕಗಳನ್ನು ಓದಬೇಕು.
ಗಂಡಂದಿರು ತಮ್ಮ ಹೆಂಡತಿ ಗರ್ಭಿಣಿಯಾಗಿದ್ದಾಗ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಕು.
ನಿಯಮಿತವಾಗಿ ಹೆಂಡತಿಯ ಕಾಲಿಗೆ ಮಸಾಜ್ ಮಾಡುವ ಮೂಲಕ ಅವರಿಗೆ ವಿಶ್ರಾಂತಿ ನೀಡಿ.
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಂಭವಿಸುತ್ತವೆ.
ಇದರಿಂದಾಗಿ ಅವರು ಆಗಾಗ ಕೋಪ ಮತ್ತು ಆತಂಕದಂತಹ ಭಾವನೆಗಳನ್ನು ಹೊಂದಿರುತ್ತಾರೆ.
ಈ ಬಗ್ಗೆ ಗಂಡನೇ ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪ ಸಹಿಸಿಕೊಂಡು ಹೋಗಬೇಕು.
ಆಕೆಗೆ ಯಾವುದಾದರೂ ವಿಚಾರವಾಗಿ ನೋವು, ಅಳು ಬಂದಾಗ ಆತ್ಮೀಯತೆಯಿಂದ ಬಾಚಿ ತಬ್ಬಿಕೊಳ್ಳಬೇಕು.