ಮಂಗಳೂರು ಸ್ಪೆಷಲ್‌ ಪತ್ರೊಡೆ ಮಾಡುವ ವಿಧಾನ!

ಮೊದಲು ಕೆಸುವಿನ ಎಲೆಯನ್ನು ನೀಟಾಗಿ ದಂಟು ಕತ್ತರಿಸಿಕೊಂಡು ಹರವಿಕೊಳ್ಳಬೇಕು. 

ಆಮೇಲೆ ಒಂದು ಬಾಣಲೆಗೆ ಕಡಲೆಬೇಳೆ, ಉದ್ದು, ಜೀರಿಗೆ, ಕೊತ್ತಂಬರಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಚೂರು ಇಂಗನ್ನು ಹಾಕಬೇಕು. 

ಬಳಿಕ ಅರ್ಧ ಅಥವಾ ಒಂದು ತಾಸು ನೆನೆಸಿಯಿಟ್ಟ ಅಕ್ಕಿ, ಕೊಬ್ಬರಿ ತುರಿಯನ್ನು ಸೇರಿಸಬೇಕು. 

ಅದರ ಜೊತೆ ಅಗತ್ಯವಾಗಿ ಬ್ಯಾಡಗಿ ಮೆಣಸಿನ ತುಂಡುಗಳ ಜೊತೆ ಹುಣಸೆ ಹಣ್ಣನ್ನು ಸೇರಿಸಬೇಕು. ನಂತರ ಮೇಲೆ ಹೇಳಿದ ಕಡಲೆಬೇಳೆಯ ಮಿಶ್ರಣಕ್ಕೆ ಇವನ್ನೆಲ್ಲಾ ಹಾಕಿ ಗ್ರೈಂಡ್ ಮಾಡಬೇಕು.

ನಂತರ ಆ ಮಿಶ್ರಣವನ್ನು ಕೆಸುವಿನ ಎಲೆಗೆ ಹದವಾಗಿ ಸವರಿ ಒಂದರ ಮೇಲೊಂದರಂತೆ ಕೆಸುವಿನ ಎಲೆ ಹಾಕಿ ಅದರ ಮೇಲೆ ಮಸಾಲೆ ಹಾಕಿ ಕೊನೆಗೆ ಕೆಸುವನ್ನು ಸುರುಳಿ ಸುತ್ತಬೇಕು.

ಹದ ಸುರಳಿ ಆದ ಮೇಲೆ ಅದನ್ನು ಇಡ್ಲಿ ಪಾತ್ರೆಯಲ್ಲಿ ಹತ್ತು ನಿಮಿಷ ಬೇಯಿಸಿದರೆ ಪತ್ರೋಡೆ ಸವಿಯಲು ಸಿದ್ಧ. ಹೀಗೆ ರೆಡಿಯಾದ ಪತ್ರೊಡೆಯನ್ನು ಬೇಕಾದಷ್ಟು ಸ್ಲೈಸ್ ಮಾಡಿ ತಿನ್ನಬಹುದು. 

ಆದರೆ ರೂಢಿಯಂತೆ ಈ ಪತ್ರೋಡೆಗೆ ಕರಾವಳಿ-ಮಲೆನಾಡಿನ ಜನ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿ ತಿನ್ನುತ್ತಾರೆ. ಆದರೆ, ಸ್ಕಿನ್ ಅಲರ್ಜಿ ಹಾಗೂ ಶುಗರ್ ಇದ್ದವರು ಜಾಸ್ತಿ ತಿನ್ನದಿರುವುದು ಒಳಿತು.

Drinking Water: ಹೀಗೆ ನೀರು ಕುಡಿದರೆ ತೂಕ ಕಡಿಮೆಯಾಗುತ್ತಂತೆ!