ಮೊದಲಿಗೆ 250 ಗ್ರಾಮ್ ಪನ್ನಿರ್ ಅನ್ನು ತೆಗೆದುಕೊಳ್ಳಿ
ಚೆನ್ನಾಗಿ ಕೈಯಿಂದ ಪನ್ನಿರನ್ನು ಪುಡಿ ಮಾಡಿಕೊಳ್ಳಿ
ನಂತರ ಒಂದು ಬಾಣಲೆಗೆ ಎಣ್ಣೆ, ಕಾಲು ಚಮಚ ಜೀರಿಗೆ, ಕಾಯಿ ಮೆಣಸು ಹಾಕಿಕೊಂಡು ಚೆನ್ನಾಗಿ ಹುರಿಯಿರಿ
ಬಳಿಕ ಈರುಳ್ಳಿ, ಅರಶಿನ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ
Breakfast Recipe: ಚಿಕನ್ ಪಲಾವ್ಗಿಂತಲೂ ಸಖತ್ ಟೇಸ್ಟಿ ಈ ಮಶ್ರೂಮ್ ಪಲಾವ್; ತಿಂದವರು ಬೇಷ್ ಅನ್ನೋದು ಗ್ಯಾರಂಟಿ!
ಈಗ ಒಂದು ಟೋಮೆಟಾವನ್ನು ಚೆನ್ನಾಗಿ ಕತ್ತರಿಸಿಕೊಂಡು ಬಾಣಲೆಗೆ ಹಾಕಿಕೊಳ್ಳಿ
ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ
ಈಗ ನೀವು ಕೈಯಿಂದ ಪುಡಿ ಮಾಡಿದ ಪನ್ನಿರನ್ನು ಸೇರಿಸಿಕೊಳ್ಳಿ
ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ
ಬಳಿಕ ಕೊತ್ತಂಬರಿ ಸೊಪ್ಪನ್ನು ಮೇಲಿನಿಂದ ಹಾಕಿಕೊಳ್ಳಿ
ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಿ, ನಂತರ ಲಿಂಬೆ ರಸವನ್ನು ಬೇಕಿದ್ರೆ ಹಾಕಿಕೊಳ್ಳಿ
ಈಗ ರೆಡಿ ಆಯ್ತು ನೋಡಿ ಪನ್ನಿರ್ ಬುರ್ಜಿ