ಛಬ್ಬಿ ಗ್ರಾಮದಲ್ಲಿ ಎಲ್ಲಿ ನೋಡಿದ್ರೂ ಜನ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಸಿಂಧೂರ ಗಣಪನ ದರ್ಶನ ಪಡೆಯುತ್ತಿರೋ ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಿದ್ದಾರೆ

ಕೋವಿಡ್ ಅವಧಿಯಲ್ಲಿ ಸ್ವಲ್ಪ ಕಳೆಗುಂದಿದ್ದ ಛಬ್ಬಿ ಸಿಂಧೂರ ಗಣೇಶೋತ್ಸವ ಗತವೈಭವಕ್ಕೆ ಮರಳಿದೆ. ಸಿಂಧೂರ ಗಣೇಶ ಅಥವಾ ವರಸಿದ್ಧಿ ವಿನಾಯಕನ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿದ್ದು ಛಬ್ಬಿ ಗ್ರಾಮದಲ್ಲಿ ಎಲ್ಲಿ ನೋಡಿದ್ರೂ ಜನ ಅನ್ನೋ ಸ್ಥಿತಿ ನಿರ್ಮಾಣವಾಗಿದೆ

ಸಿಂಧೂರ ಗಣಪನ ದರ್ಶನ ಪಡೆಯುತ್ತಿರೋ ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಿದ್ದಾರೆ

ಎಲ್ಲರಂತಲ್ಲ ಛಬ್ಬಿ ಗಣಪ. ದೇಶದ ಮೋಸ್ಟ್ ಪವರ್ ಫುಲ್ ಸಿಂಧೂರ ಗಣಪ..! ಪ್ರತಿ ವರ್ಷವೂ ಒಂದೇ ವರ್ಣ, ಒಂದೇ ಸೈಜ್. ಎಲ್ಲ ಗಣಪಗಳ ಬಲಗೈಯಿಂದ ಆಶೀರ್ವಾದ ಮಾಡಿದರೆ, ಈ ಗಣಪನ ಕೈಯಲ್ಲಿ ಮಾತ್ರ ಮುರಿದ ದಂತ, ಮತ್ತೊಂದು ಕೈಯಲ್ಲಿ ಲಿಂಗವಿದೆ

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣಪನ ಮಹಿಮೆ ಬಗ್ಗೆ ಉತ್ತರ ಕರ್ನಾಟಕದ ಮನೆ ಮನೆಗೂ ಗೊತ್ತು. ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು

ಛಬ್ಬಿ ಗಣಪನನ್ನು ಪ್ರತಿ ವರ್ಷವೂ ಮೂರು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಾಗುತ್ತದೆ. ಎಲ್ಲ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡೋದು ಸಹಜ

ಆದ್ರೆ ಇಲ್ಲಿ ಮಾತ್ರ ಮನೆಯಲ್ಲಿಯೇ ಗಣೇಶ ಪ್ರತಿಷ್ಠಾಪನೆ ಮಾಡಿ, ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ

21 ಇಂಚಿನ ಸಿಂಧೂರ ಗಣಪ ಇದರ ಮತ್ತೊಂದು ವಿಶೇಷ. ಕುಲಕರ್ಣಿಯವರ ಮನೆಯಲ್ಲಿ ಸಿಂಧೂರ ಗಣಪ ಪ್ರತಿಷ್ಠಾಪನೆಗೊಳ್ಳುತ್ತದೆ

ಸ್ವಾತಂತ್ರ್ಯೋತ್ಸವದಲ್ಲಿ ಜನರನ್ನು ಒಂದೆಡೆ ಸೇರಿಸಲು ಬಾಲಗಂಗಾಧರ ತಿಲಕ್ ರಿಂದ ಸಾರ್ವಜನಿಕ ಗಣೇಶೋತ್ಸವ ಆರಂಭಗೊಂಡಿತು. ಆದ್ರೆ ಅದಕ್ಕಿಂತ ಅರ್ಧ ಶತಮಾನಕ್ಕೂ ಮುಂಚೆಯೇ ಛಬ್ಬಿಯಲ್ಲಿ ಗಣೇಶೋತ್ಸವ ಆರಂಭಗೊಂಡಿತ್ತು. 1827 ರಿಂದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತ ಬಂದಿದೆ. ಈ ಬಾರಿ 197ನೇ ಗಣೇಶೋತ್ಸವ ಸಂಭ್ರಮ ನಡೆದಿದೆ

ಸತತ ಮೂರು ಬಾರಿ ದರ್ಶನ ಪಡೆದರೆ ಎಲ್ಲ ಬೇಡಿಕೆಗಳೂ ಈಡೇರುತ್ತೆ ಅನ್ನೋ ನಂಬಿಕೆ ಭಕ್ತರದ್ದಾಗಿದೆ