ಸತತ 5ನೇ U19 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ ಯಂಗ್ ಟೈಗರ್ಸ್!
2016ರಿಂದ ಭಾರತ ತಂಡ ಸತತವಾಗಿ 5 ವಿಶ್ವಕಪ್ ಗಳಲ್ಲಿ ಫೈನಲ್ ಪ್ರವೇಶಿಸಿದೆ.
ಭಾರತ ಕಿರಿಯರ ತಂಡ ಅಂಡರ್ 19 ವಿಶ್ವಕಪ್ ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
ಹರಿಣ ಪಡೆ ನೀಡಿದ್ದ 245 ರನ್ ಗಳ ಬೆನ್ನತ್ತಿದ ಭಾರತ ತಂಡ ಆದರ್ಶ್ ಸಿಂಗ್ ರನ್ನ ಮೊದಲ ಓವರ್ ನಲ್ಲೇ ಕಳೆದುಕೊಂಡಿತು.
ಇಲ್ಲಿಂದ ಸಾಗಿ ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಅಸಾಧ್ಯ ಎಂದೇ ಭಾವಿಸಲಾಗಿತ್ತು.
ನಾಯಕ ಉದಯ್
ಸಹರಾನ್ ಮತ್ತು ಸಚಿನ್
ಧಾಸ್ ಎಲ್ಲಾ ಲೆಕ್ಕಾಚಾರವನ್ನು
ಉಲ್ಟಾ ಮಾಡಿದರು.
ಉದಯ್
ಸಹರಾನ್ ಮತ್ತು ಸಚಿನ್ ಧಾಸ್ ಜೋಡಿ ಕ್ರೀಸ್
ನಲ್ಲಿ ನೆಲೆಯೂರುವ ತನಕೆ ಎಚ್ಚರಿಕೆಯ ಆಟ ಆಡಿದರು.
ಸಚಿನ್ ಧಾಸ್ 95 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 96 ರನ್ಗಳಿಸಿ ಗೆಲುವಿಗೆ 42 ರನ್ಗಳ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು.
ಸಚಿನ್ ಧಾಸ್ ಕೇವಲ 4 ರನ್ಗಳಿಂದ ಅದ್ಭುತ ಶತಕ ಮಿಸ್ ಮಾಡಿಕೊಂಡರು.
5 ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.