ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ದಿಕ್ಕಿನ ಅನುಸಾರ ಇಟ್ಟರೆ ಅದರಿಂದ ಸಂಪತ್ತು ಹೆಚ್ಚಾಗುತ್ತದೆ

ಹಾಗಾದ್ರೆ ಯಾವ ವಸ್ತುಗಳನ್ನ ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿದೆ

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ

 ನಾವು ಮನೆ ಕಟ್ಟುವಾಗ ಅಥವಾ ಯಾವುದೇ ವಸ್ತುಗಳನ್ನ ಇಡುವಾಗ ದಿಕ್ಕುಗಳ ಅನುಸಾರ ನಿರ್ಧಾರ ಮಾಡುತ್ತೇವೆ. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ

ಪ್ರತಿಯೊಬ್ಬರು ವಾಸ್ತು ಪ್ರಕಾರ ತನ್ನ ಮನೆಯನ್ನು ಕಟ್ಟಲು ಇಷ್ಟ ಪಡುತ್ತಾರೆ. ವಾಸ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ,

ಮನೆಯ ಸದಸ್ಯರು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಹಾಗಾಗಿ ವಾಸ್ತು ಬಹಳ ಮುಖ್ಯ ಎನ್ನಬಹುದು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ನಿರ್ದಿಷ್ಟವಾದ ದಿಕ್ಕಿನಲ್ಲಿ ಇಡಬೇಕು. ಮುಖ್ಯವಾಗಿ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಅತ್ಯಂತ ಮಂಗಳಕರ ಎನ್ನಲಾಗುತ್ತದೆ

ದಕ್ಷಿಣ ದಿಕ್ಕನ್ನು ಯಮ, ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ದಿಕ್ಕಿನಲ್ಲಿ ಯಾವ ವಸ್ತುಗಳನ್ನ ಇಡಬೇಕು ಎಂಬುದು ಇಲ್ಲಿದೆ

Health Care: ಚಳಿಗಾಲದಲ್ಲಿ ತಣ್ಣೀರು-ಬಿಸಿನೀರು ಅಂತ ಜಾಸ್ತಿ ನೀರು ಕುಡಿತೀರಾ? ಹಾಗಾದ್ರೆ ಮೊದ್ಲು ಈ ವಿಚಾರ ತಿಳಿದುಕೊಳ್ಳಿ!

ವಾಸ್ತು ಪ್ರಕಾರ, ಪೊರಕೆಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ

 ಮುಖ್ಯವಾಗಿ ಕುಟುಂಬವನ್ನ ಒಂದುಗೂಡಿಸುತ್ತದೆ ಇದು ಎನ್ನುವ ನಂಬಿಕೆ ಇದೆ

ಇದಲ್ಲದೇ ಹಾಲ್ ಅಥವಾ ಡ್ರಾಯಿಂಗ್ ರೂಂನಲ್ಲಿ ಯಾವಾಗಲೂ ಜೇಡ್ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದರಿಂದ ವಾಸ್ತು ದೋಷಗಳು ನಿವಾರಣೆ ಆಗುತ್ತದೆ

ಅಲ್ಲದೇ, ಇದು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನ ಹೆಚ್ಚಿಸುತ್ತದೆ

ಅಡುಗೆ ಮನೆಯ ಸಿಂಕ್​ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ!