ಸಾಮಾನ್ಯವಾಗಿ ಮನೆಯಲ್ಲಿ ದೇವರ ಮುಂದೆ ದೀಪಗಳನ್ನ ಹಚ್ಚುತ್ತೇವೆ. ಆದರೆ ಆ ದೀಪದಲ್ಲಿ ಕಾಣುವ ಆಕಾರವನ್ನ ನಾವು ಗಮನಿಸುವುದಿಲ್ಲ
ಜ್ಯೋತಿಷ್ಯದ ಪ್ರಕಾರ ದೀಪದಲ್ಲಿ ಕಾಣುವ ಆಕಾರ ನಮ್ಮ ಭವಿಷ್ಯವನ್ನ ತಿಳಿಸುತ್ತದೆ. ಆ ಆಕಾರಗಳೇನು ಎಂಬುದು ಇಲ್ಲಿದೆ
ನಮ್ಮ ಸಂಪ್ರದಾಯದಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಶುಭ ಕಾರ್ಯ, ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ದೀಪವನ್ನು ಹಚ್ಚುವ ಅಭ್ಯಾಸವಿದೆ
ಯಾವುದೇ ಕಾರ್ಯ ಆರಂಭ ಮಾಡುವ ಮೊದಲು ದೀಪವನ್ನ ಬೆಳಗಿಸಲಾಗುತ್ತದೆ
ದೀಪವನ್ನು ಬೆಳಗಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ
ಆದರೆ ನಿಮಗೆ ಗೊತ್ತಾ ದೀಪದ ಜ್ವಾಲೆಯಿಂದ ಬರುವ ಆಕಾರ ನಮಗೆ ಅನೇಕ ಸೂಚನೆಗಳನ್ನ ನೀಡುತ್ತದೆ. ಹೌದು, ಜ್ವಾಲೆಯ ಆಕಾರಕ್ಕೂ ಅನೇಕ ಅರ್ಥಗಳಿದೆ
ಕೇವಲ ದೀಪ ಹಚ್ಚುವಾಗ ಮಾತ್ರವಲ್ಲ ಆರತಿ ಮಾಡುವಾಗ ದೀಪದ ಜ್ವಾಲೆಯಿಂದ ಯಾವುದೇ ಆಕಾರ ಬಂದರೂ ಸಹ ಅದರ ಹಿಂದೆ ಒಂದು ರಹಸ್ಯ ಇರುತ್ತದೆ
ಭೋಪಾಲ್ ಮೂಲದ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ ಆ ಅರ್ಥಗಳೇನು ಎಂಬುದು ಇಲ್ಲಿದೆ
ಥಿಯೇಟರ್ಗೆ ಬಂತು ಕ್ಯಾಪ್ಟನ್ ಮಿಲ್ಲರ್! ಸಿನಿಮಾ ನೋಡಿ ಜನ ಏನಂದ್ರು?
ಹೂವಿನ ಆಕಾರ: ದೀಪವನ್ನು ಹಚ್ಚಿದ ನಂತರ, ಅದರಲ್ಲಿ ಹೂವಿನ ಆಕಾರವು ಕಾಣಿಸಿಕೊಂಡರೆ, ಅದು ಅದೃಷ್ಟದ ಸಂಕೇತ ಎನ್ನಲಾಗುತ್ತದೆ
ತ್ರಿಶೂಲ ಆಕಾರ: ದೀಪದ ಜ್ವಾಲೆಯಿಂದ ನಿಮಗೆ ತ್ರಿಶೂಲ ಆಕಾರ ಕಾಣಿಸಿದರೆ ಸಹ ಅದು ನಿಮಗೆ ಒಳ್ಳೆಯದಾಗುತ್ತದೆ ಎನ್ನುವುದರ ಸಂಕೇತ ಎನ್ನಲಾಗುತ್ತದೆ
ನವಿಲು ಗರಿ: ನೀವು ದೀಪದ ಜ್ವಾಲೆಯಲ್ಲಿ ನವಿಲು ಗರಿ ಅಥವಾ ಕೊಳಲಿನ ಆಕಾರ ಕಾಣಿಸಿಕೊಂಡರೆ ಮಂಗಳಕರ ಎನ್ನಲಾಗುತ್ತದೆ
ವೃತ್ತಾಕಾರ: ನಿಮಗೆ ದೀಪದ ಜ್ವಾಲೆಯಲ್ಲಿ ವೃತ್ತಾ ಆಕಾರ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗುವ ಸಂಕೇತವಾಗಿದೆ
ಪ್ರತಿದಿನ ಬಾಳೆಹಣ್ಣು ತಿಂದ್ರೆ ಈ ಡೇಂಜರ್ ಕಾಯಿಲೆ ಬರಲ್ವಂತೆ!